25ರಂದು ಆರ್‍ಸಿ, ಡಿಸಿ ಕಚೇರಿ ಮುತ್ತಿಗೆ

ಕಲಬುರಗಿ ನ 22 ಕೇಂದ್ರ ಸರಕಾರದ ಆದೇಶದಂತೆ ರಾಜ್ಯ ಸರಕಾರ ಹೊರಡಿಸಿರುವ ಸುತ್ತೋಲೆಯ ಪ್ರಕಾರ ತಳವಾರ, ಪರಿವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡವಂತೆ ಒತ್ತಾಯಿಸಿ ನ 25 ರಂದು ಕಲಬುರಗಿಯ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕರಿಗಳ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ.ಸರ್ದಾರ ರಾಯಪ್ಪ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಹಮ್ಮಿಕೊಂಡಿರುವ 88ನೇ ದಿನದ ಧರಣಿ ಸತ್ಯಾಗ್ರಹ ಹಾಗೂ 73ನೇ ಸರತಿ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯ ಪತ್ರದ ಪ್ರಕಾರ ತಳವಾರ, ಪರಿವಾರದ ಜನರಿಗೆ ಎಸ್.ಟಿ ಪ್ರಮಾಣ ಪತ್ರ ನೀಡುವಂತೆ ತಹಸೀಲ್ದಾರರಿಗೆ ಸಂಪೂರ್ಣ ಅಧಿಕಾರ ನೀಡಿದೆ. ತಹಸೀಲ್ದಾರರಿಗೆ ಕೇಳಿದರೆ ಅವರು ಜಿಲ್ಲಾಧಿಕಾರಿಗಳಿಂದ ನಮಗೆ ಯಾವುದೇ ಆದೇಶ ಬಂದಿಲ್ಲವೆಂದು ಹೇಳಿ ಸಬೂಬು ನೀಡಿ ಜಾರಿಕೊಳ್ಳುತ್ತಿದ್ದಾರೆ.ಸರ್ಕಾರದಿಂದ ಅಗಸ್ಟ 31ರಂದೇ ಕೊನೆಯ ಆದೇಶ ಬಂದಿದೆ. ಆದರೆ ಇಲ್ಲಿಯವರೆಗೆ ಆರ್ ಸಿ, ಡಿಸಿಯವರು ನಮಗೆ ಎಸ್.ಟಿ ಪ್ರಮಾಣ ಪತ್ರ ನೀಡುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ಹೋರಾಟಕ್ಕೆ ಮಹಾರಾಷ್ಟ್ರ ಹಾಗೂ ಆಂಧ್ರ, ತೆಲಂಗಾಣದಿಂದ ಸಮಾಜದ ಜನ ಬರಲಿದೆ. ಇಲ್ಲಿನ ಸಮಾಜದ ಸ್ವಾಮೀಜಿಗಳು ಗುರುಹಿರಿಯರು ಎಲ್ಲ ಪಕ್ಷದಲ್ಲಿರುವ ರಾಜಕೀಯ ಮುಖಂಡರು ಯುವ ಮುಖಂಡರು ರಾಜ್ಯದ ಮೂಲೆ ಮೂಲೆಯಿಂದ ಬರುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶರಣ ಕೊತ್ತಲಪ್ಪ ಮುತ್ಯಾ ತೊನಸನಹಳ್ಳಿ ,ಸುನೀತಾ ತಳವಾರ, ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಳ್ಳಿ, ಚಂದ್ರಕಾಂತ ಗಂವ್ಹಾರ, ಅನಿಲ ವಚ್ಚಾ, ರಾಚಜಣ್ಣ ಯಡ್ರಾಮಿ, ಚಂದ್ರಶೇಖರ ಜಮಾದಾರ, ಶರಣು ಕೋಳಿ, ಸಂಗಮೇಶ ತಳವಾರ, ವಿಜಯಕುಮಾರ ಹಾಬನೂರ, ಸಂತೋಷ ದೇಸಾಯಿ ಕಲ್ಲೂರ, ರವಿ ಶಾಬಾದ, ಬೆಳ್ಯಪ್ಪ ಕಣದಾಳ, ಮುಂತಾದವರು ಇದ್ದರು.