25ಕ್ಕೂ ಹೆಚ್ಚು ಯುವಕರಿಂದ ಸ್ವಯಂ ಪ್ರೇರಿತ ರಕ್ತದಾನ

ಮೈಸೂರು. ಏ.26: ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಮೊದಲು ರಕ್ತದಾನ ನಂತರ ಕೋವಿಡ್ ಲಸಿಕೆ ಎಂದು ಸ್ವಯಂ ಪ್ರೇರಿತ 25 ಕ್ಕೂ ಹೆಚ್ಚು ಯುವಕರು ನಗರದ ಲಯನ್ಸ್ ಜೀವಧಾರ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು.
ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪ್ರಾರಂಭವಾಗುವುದರಿಂದ ಎರಡರಿಂದ ಮೂರು ತಿಂಗಳು ಕೋವಿಡ್ ಲಸಿಕೆ ಪಡೆದಂತಹ ವ್ಯಕ್ತಿಗಳು ರಕ್ತ ಕೊಡಲು ಸಾಧ್ಯವಾಗದೇ ಇರುವುದರಿಂದ ರೋಗಿಗಳಿಗೆ ಅನುಕೂಲವಾಗುವಂತೆ ಸ್ವಯಂ ಪ್ರೇರಿತರಾಗಿ ಪದಾಧಿಕಾರಿಗಳು ರಕ್ತದಾನ ಮಾಡುವ ಮುಖಾಂತರ ಮೊದಲು ರಕ್ತದಾನ ಮಾಡುವ ಮುಖಾಂತರ ಯುವಕರಿಗೆ ಜಾಗೃತಿ ಮೂಡಿಸುವ ಅಭಿಯಾನ ಏರ್ಪಡಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಕ್ಷೇತ್ರದ ಅಧ್ಯಕ್ಷರಾದ ಡಿ.ಲೋಹಿತರವರು ಮೇ 1ರ ನಂತರ ಪ್ರಾರಂಭವಾಗುವ 18 ವರ್ಷದ ಮೇಲ್ಪಟ್ಟ ಯುವಕರಿಗೆ ಲಸಿಕೆಯಿಂದ ಪಡೆದ ನಂತರ ರಕ್ತದಾನ ಮಾಡಲು ಸಾಧ್ಯವಾಗದ ಕಾರಣ ಅನೇಕ ರೋಗಿಗಳು ಎರಡರಿಂದ ಮೂರು ತಿಂಗಳು ರಕ್ತದ ಅಭಾವದಿಂದ ಸಾವನ್ನಪ್ಪುವ ಸಂಭವ ಕೂಡ ಹೆಚ್ಚುತ್ತದೆ ಆದ್ದರಿಂದ ಅತಿ ಹೆಚ್ಚು ಯುವಕರು ಲಸಿಕೆ ಪಡೆಯುವ ಮುನ್ನ ಸ್ಥಳೀಯ ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತ ಮಾಡುವ ಮುಖಾಂತರ ರೋಗಿಗಳಿಗೆ ಅನುಕೂಲವಾಗುವಂತೆ ಮಾಡುವುದು ಬಹಳ ಉತ್ತಮವಾದಂತಾಗುತ್ತದೆ.
ನಂತರ ಮಾತನಾಡಿದ ಬಿಜೆಪಿ ಮೈಸೂರು ನಗರ ಉಪಾಧ್ಯಕ್ಷರಾದ ಕಾರ್ತಿಕ್ ಮರಿಯಪ್ಪ ನವರು ಮಾತನಾಡಿ ಸಾರ್ವಜನಿಕರಿಗೆ ಉಪಯೋಗವ ಕೆಲಸವನ್ನು ಬಿ ಜೆ ಪಿ ಯ ಯುವ ಮೋರ್ಚಾ ತಂಡ ಸದಾ ಸಿದ್ಧ ಯುವಕರಲ್ಲಿ ಈ ರೀತಿ ಜನ ಸಾಮಾನ್ಯರ ಬಗ್ಗೆ ಕಾಳಜಿ ಇರಬೇಕು ಕೊರೋನ ಮೊದಲನೆ ಅಲೆಯಲ್ಲು ಸಹ ನಮ್ಮ ಬಿಜೆಪಿಯ ತಂಡ ದವಸ ಧಾನ್ಯಗಳನ್ನು ಕೊಡಲಾಗಿತ್ತು. ಈ ಭಾರಿ 2 ನೇ ಅಲೆಯಲ್ಲಿ ಸಹ ಕೊರೋನ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದೇವೆ ಜನಗಳಿಗೆ ಆತ್ಮ ಸ್ಥೈರ್ಯ ತುಂಬುವ ಮೂಲಕ ಯುವ ಮೋರ್ಚಾ ತಂಡ ರಕ್ತದಾನ ಮಾಡುತ್ತಿದ್ದೇವೆ.
ಈ ಕಾರ್ಯಕ್ರಮದಲ್ಲಿ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್, ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಮರಿಯಪ್ಪ, ಅವರು ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ವೇಲು ರವರು ನರಸಿಂಹರಾಜ É್ಷೀತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಧನರಾಜ್, ನಗರ ಹಿಂದುಳಿದ ವರ್ಗ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಜೀವನ್, ಯುವ ಮೋರ್ಚಾ ಉಪಾಧ್ಯಕ್ಷರಾದ ಚೇತನ್, ಸದಸ್ಯರಾದ ರಕ್ಷಿತ್,ಮತ್ತು ಪ್ರದೀಪ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.