ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಕೆಪಿಸಿಸಿ ಸೂಚನೆ ಮೇರೆಗೆ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಪೆಟ್ರೋಲ್ ಬಂಕ್ ಮುಂಭಾಗ ಸಂಪತ್ ರಾಜ್ ಸಿ.ವಿ. ರಾಮನ್ ನಗರ ಕ್ಷೇತ್ರದ ಅಭ್ಯರ್ಥಿ, ಜೀವನ್ ಭೀಮಾನಗರ ಬ್ಲಾಕ್ ಅಧ್ಯಕ್ಷ ಹರೀಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಜೀವನ್ ಭೀಮಾನಗರ ಬ್ಲಾಕ್ ಯುವ ಅಧ್ಯಕ್ಷ ಸುಧೀರ್, ಬೆಂ. ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಂದೀಶ್ ರೇವಣ್ಣ, ಸಾಮಾಜಿಕ ಮಾಧ್ಯಮ ಪ್ರಧಾನ ಕಾರ್ಯದರ್ಶಿ ಅವೀಶ್ ಆನಂದ್, ಜೀವನ್ ಭೀಮಾನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಮತ್ತಿತರರು ಇದ್ದಾರೆ.