ನೈಋತ್ಯ ರೇಲ್ವೆಯ ಪ್ರಧಾನ ಮುಖ್ಯ ಇಂಜಿನಿಯರ್ ಆಗಿ ಸೋಮವಾರ ಹುಬ್ಬಳ್ಳಿಯಲ್ಲಿ ಅಧಿಕಾರ ವಹಿಸಿಕೊಂಡ ಎಸ್.ಪಿ.ಎಸ್.ಗುಪ್ತಾ ಅವರನ್ನು ಭಾರತೀಯ ರೇಲ್ವೆ ಮೂಲಸೌಕರ್ಯ ಒದಗಿಸುವವರ ಸಂಘದ (ಐಆರ್‍ಐಪಿಎ) ಕಾರ್ಯದರ್ಶಿ ಹುಬ್ಬಳ್ಳಿಯ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ.ಪ್ರಸಾದ ಸ್ವಾಗತಿಸಿ, ಸನ್ಮಾನಿಸಿದರು. ಸಂಘದ ಖಜಾಂಚಿ ಎಸ್.ವಿ ಗ್ರುಪ್ ವ್ಯವಸ್ಥಾಪಕ ಭಾಗೀದಾರ ಕೆ.ರಮಣಮೂರ್ತಿ ಇತರರು ಇದ್ದರು.