ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತರ ಅಧ್ಯಕ್ಷ ವೈ. ಸಯ್ಯದ ಇವರ ಆದೇಶದ ಮೇರೆಗೆ ಧಾರವಾಡದಲ್ಲಿಂದು ಅಲ್ಪಸಂಖ್ಯಾತರ ಘಟಕ ವತಿಯಿಂದ ಗ್ರಾಮೀಣ ಅಧ್ಯಕ್ಷರಾದ ಮಹಬೂಬ ಮುಲ್ಲಾ ಇವರ ನೇತ್ರತ್ವದಲ್ಲಿ ದಿನಸಿ ಆಹಾರ ಕಿಟ್ ಗಳನ್ನು, ಮಾಸ್ಕ್‍ಗಳನ್ನು ಬಡವರಿಗೆ ವಿತರಿಸಲಾಯಿತು. ಅಲ್ಪಸಂಖ್ಯಾತರ ರಾಜ್ಯ ಸದ್ಯಸ ಎ.ಎಮ.ಖಾದ್ರಿ, ಸಲ್ಮಾನ ಬೇಲಿಪ್, ಎನ್.ಎಮ್.ರೇಶಮವಾಲೆ, ಮತ್ತು ಕಾಂಗ್ರೆಸ ಮುಖಂಡರಾದ ಆನಂದ ಸಿಂಗನಾಥ, ಪ್ರಕಾಶ ಭಾವಿಕಟ್ಟಿ, ಶರಣಪ್ಪ ತಳವಾರ, ಸುರೇಶ ಗೊಂದಳಿ, ಬಸವರಾಜ ಬಾರಕೆರ ಉಪಸ್ಥಿತರಿದ್ದರು.