ಇನ್ಫೋಸಿಸ್ ಫೌಂಡೇಶನ್‍ನ ಸುಧಾಮೂರ್ತಿ ಅವರು ಕೊಡಮಾಡಿದ ಆಹಾರಧಾನ್ಯದ ಕಿಟ್‍ಗಳನ್ನು ಇಂದು ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದಿಂದ ನಗರದ ವಿವಿಧ ದೇವಸ್ಥಾನಗಳ ಸುಮಾರು 300 ಅರ್ಚಕರಿಗೆ ಸುಧಾಕರ್ ಅವರು ನಗರದ ಮೂರು ಸಾವಿರ ಮಠದಲ್ಲಿ ವಿತರಣೆ ಮಾಡಿದರು. ರಾಷ್ಟ್ರೋತ್ಥಾನ ಟ್ರಸ್ಟಿಗಳಾದ ದತ್ತಮೂರ್ತಿ ಕುಲಕರ್ಣಿ, ಭಾರತೀಯ ಜನತಾ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಬಿಜೆಪಿಯ ಲಿಂಗರಾಜ್ ಪಾಟೀಲ್, ಮಲ್ಲಿಕಾರ್ಜುನ್ ಸಾಹುಕಾರ್, ಬಿಜೆಪಿ ವಕ್ತಾರ ರವಿ ನಾಯಕ, ಕಿರಣ್ ಗಡ ಮೊದಲಾದವರು ಉಪಸ್ಥಿತರಿದ್ದರು.