ಹತ್ತಿ ಬೀಜಗಳ ಗುಣಮಟ್ಟ ತಪಾಸಣೆ
ಬಾದಾಮಿ, ಜೂ 8: ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಸಂಜೀವಿನಿ ಗುಣ ನಿಯಂತ್ರಣ ತಂಡದ ಅಧಿಕಾರಿಗಳು ಸೋಮವಾರ ನಗರದ ನಂದಿಕೇಶ್ವರ ಮಳಿಗೆಗೆ ಭೇಟಿ ನೀಡಿ ರೈತ ಸಂಪರ್ಕ ಕೇಂದ್ರ, ಆತ್ಮ ಯೋಜನೆಯ ಸಿಬ್ಬಂದಿ ಮತ್ತು ರೈತರ ಸಮ್ಮುಖದಲ್ಲಿ ಬಿಟಿ ಹತ್ತಿಯ ಎಸ್.ಎಸ್.ಬಿ.-94 ತಳಿಯ ಕಳಸ ಕಂಪನಿಯ ಬೀಜಗಳ ಗುಣಮಟ್ಟ ತಪಾಸಣೆ ಮಾಡಲಾಯಿತು.
ಬೀಜದ ಶುದ್ದತೆ ಒಳ್ಳೆಯ ಗುಣಮಟ್ಟ ಕಂಡು ಬಂದಿದ್ದು, ವಿವಿಧ ತಪಾಸಣೆ ಮಾದರಿಗಳನ್ನು ಪಡೆದು ರೈತರ ಸಮ್ಮುಖದಲ್ಲಿ ಬೀಜದ ಗುಣಮಟ್ಟ ಚೆನ್ನಾಗಿರುವುದನ್ನು ಖಾತರಿಪಡಿಸಿಕೊಂಡಿದೆ ಎಂದು ರೈತರಿಗೆ ತಿಳಿಸಿದರು.
ಗೊಬ್ಬರವನ್ನು ಚೀಲದ ಮೇಲೆ ನಮೂದಿಸಿದ ಎಂ.ಆರ್.ಪಿ.ದರದಲ್ಲಿ ಮಾರಾಟ ಮಾಡುತ್ತಿರುವುದನ್ನು ವೀಕ್ಷಿಸಲಾಯಿತು. ನಂದಿಕೇಶ್ವರ ಟ್ರೇಡರ್ಸ ಮಳಿಗೆಯನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಕಟಗೇರಿ, ಜಂಟಿ ನಿರ್ದೇಶಕರ ಕಚೇರಿಯ ಲ್ಯಾಬ್ ಟೆಕ್ನಿಷಿಯನ್ ಮಹಾಂತೇಶ ಕುಂಟೋಜಿ, ಆತ್ಮ ಯೋಜನೆಯ ವ್ಯವಸ್ಥಾಪಕ ಐ.ಎನ್.ಕೆಂಗಾರ ಹಾಜರಿದ್ದರು.