ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 51(63)ರ ಬೂತ್ ನಂ. 22 ಭಾನಿ ಓಣಿಯಲ್ಲಿ ಬಿಜೆಪಿ ಹು-ಧಾ ಪೂರ್ವ ಕ್ಷೇತ್ರ ಮಂಡಲದ ಅಧ್ಯಕ್ಷ ಪ್ರಭು ನವಲಗುಂದಮಠ ರವರ ಅಧ್ಯಕ್ಷತೆಯಲ್ಲಿ ಹಾಗೂ ಒಬಿಸಿ ಮೋರ್ಚಾ ಅಧ್ಯಕ್ಷ ಮಲ್ಲಪ್ಪ ಶಿರಕೋಳ ಇವರ ನೇತೃತ್ವದಲ್ಲಿ ಕೊರೊನಾ ಸಂಕಷ್ಟದಲ್ಲಿ ಇದ್ದ ಬಡವರಿಗೆ ಆಹಾರ ಧಾನ್ಯಗಳ ರೇಷನ್ ಕಿಟ್‍ಗಳನ್ನು ರಾಜ್ಯ ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ವಿತರಿಸುವ ಮೂಲಕ ಚಾಲನೆ ನೀಡಿದರು. ಬಲವೀರ್ ಠಾಕೂರ, ದಯಾನಂದ ಚವ್ಹಾಣ, ಸದಾನಂದ ಮೈದರಿಗಿ, ಮಹೇಂದ್ರ ಪವಾರ್, ಭೀಮಸಿ ತಳವಾರ, ಗಂಗಾಧರ ಸಂಗಮಶೆಟ್ಟರ ಹಾಗೂ ಅನೇಕರು ಉಪಸ್ಥಿತರಿದ್ದರು.