ಬಾಗಲಕೋಟೆ ನವನಗರದ ಜಿಲ್ಲಾ ತರಬೇತಿ ಕೇಂದ್ರದಿಂದ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಗುಡೂರ ಸಸಿಗಳನ್ನು ನೆಟ್ಟರು. ಇದೇ ಸಂದರ್ಭದಲ್ಲಿ ತರಬೇತಿ ಕೇಂದ್ರದ ಸಿಬ್ಬಂದಿಗಳಾದ ದ್ರಾಕ್ಷಾಯಿಣಿ ನಿಲುಗಲ್ಲ, ಶಾಂತಾ ಪಾಟೀಲ, ಶೃತಿ ಅಳ್ಳಗಿ, ರಾಘು ಮೇಡಿ ಇದ್ದರು.