ಹು ಧಾದ ಅಮರಗೋಳದಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದಿಂದ ನವನಗರ, ಸುತಗಟ್ಟಿ ಅಮರಗೋಳ ರಾಯಪುರ ಗಾಮನಗಟ್ಟಿಯ ಎಲ್ಲಾ ಗ್ರಾಮಗಳ ಆಟೋ ರಿಕ್ಷಾ ಚಾಲಕರಿಗೆ 300 ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ದೀಪಾ ಗೌರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಷಣ್ಮುಖ ಬೆಟಗೇರಿ, ಕಾಶಿಮಸಾಬ್ ದರ್ಗದ, ಬಸವರಾಜ ಮನಗುಂಡಿ, ಶಿವಲಿಂಗಣ್ಣ ನಾಗಣ್ಣವರ್, ಕಲ್ಲಪ್ಪ ವಾಲಿಕಾರ, ಲಕ್ಶ್ಮೀ ಗುತ್ತೆ, ತ್ರಿಶೀಲ ಎಂ. ಇನ್ನಿತರರು ಉಪಸ್ಥಿತರಿದ್ದರು.