ಅಣ್ಣಿಗೇರಿ ತಾಲೂಕು ಬಲ್ಲರವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ನಿಯಮಿತ ಸಂಘದ ಆಶ್ರಯದಲ್ಲಿ ಸಾಮಾಜಿಕ ಅಂತರದೊಂದಿಗೆ ಗ್ರಾಮದ ಸುಮಾರು 50 ಕಡುಬಡವ ಫಲಾನುಭವಿಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ಮಹೇಶ ಇನಾಮತಿ, ಮುಖ್ಯ ಅತಿಥಿಗಳಾಗಿ ಗ್ರಾ ಪಂ. ಸದಸ್ಯರಾದ ಪ್ರವೀಣ ಶರೇವಾಡ, ಸವಿತಾ ರಾಮರಡ್ಡಿ ಇನಾಮತಿ, ಮಹಾದೇವಿ ಮಾಂತೇಶ್ ಅಳ್ಳಪ್ಪನವರ, ಬಸವಣ್ಣವ್ವ ಸುರೇಶ ಬೆಳದಡ, ಸಂಘದ ಸದಸ್ಯರಾದ ಅಶೋಕ ಶಾನವಾಡ, ಟಿಪ್ಪು ಸುಲ್ತಾನ ನದಾಫ, ಬ್ಯಾಂಕಿನ ವ್ಯವಸ್ಥಾಪಕರಾದ ದೇವೇಂದ್ರಪ್ಪ ಡೊಳ್ಳಿನ, ಸಿಬ್ಬಂದಿ ದೇವೇಂದ್ರಪ್ಪ ದಾಸರ ಉಪಸ್ಥಿತರಿದ್ದರು.