ಲಕ್ಷ್ಮೇಶ್ವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕನ್ನಡ ಗಂಡು ಮಕ್ಕಳ ಶಾಲೆ ಬಳಿ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಆಹಾರ ಕಿಟ್ ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿಎಸ್ ಹರಲಾಪು ವಿತರಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್ ಸಿ ಅಣ್ಣಿಗೇರಿ, ಬಿ.ಕೆ ದ್ಯಾವನಗೌಡರ, ಎಲ್ ಎಲ್ ನಂದೆಣ್ಣವರ, ಜ್ಯೋತಿ ಗಾಯಕವಾಡ, ಬಸವರಾಜ ಯತ್ನಹಳ್ಳಿ, ಡಿ.ಡಿ ಲಮಾಣಿ, ಚಂದ್ರು ನೇಕಾರ ಇದ್ದರು.