ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಬೆಳದಡಿ, ಬೆಳ್ಳಟ್ಟಿ, ಕುರಡಗಿ, ಸುರಕೋಡ ಹಾಗೂ ಅಂತೂರ ಗ್ರಾಮ ಪಂಚಾಯತಿಗಳಿಗೆ ನೀಡಲಾಗುತ್ತಿರುವ ಸ್ವಚ್ಚ ವಾಹಿನಿ ಎಂಬ ಘನ ತ್ಯಾಜ್ಯ ಕಸವಿಲೇವಾರಿ ವಾಹನಗಳಿಗೆ ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್.ಎಸ್ ಮತ್ತು ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೇರಿದಂತೆ ಜಿಲ್ಲಾ ಸಮಾಲೋಚಕರಾದ ಕೃಷ್ಣ ದೊಡ್ಡಮನಿ, ಎಚ್.ಎಸ್. ಕೂಸಣ್ಣವರ, ಸುರೇಶ್ ಕಪ್ಪದನವರ ಇದ್ದರು.