ಎಸ್ ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಆಕ್ಸಿ ಕಾನ್ಸಂಟ್ರೇಟರ್ಸ್ ಬ್ಯಾಂಕ್ ಗೆ 5 ಲೀಟರ್ ಮತ್ತು 10 ಲೀಟರ್ ಆಕ್ಸಿ ಕಾನ್ಸಂಟ್ರೇಟರ್ಸ್‍ಗಳನ್ನು ಸಚಿವ ಜಗದೀಶ ಶೆಟ್ಟರ ಅವರ ಮನೆಯ ಆವರಣ ಕೇಶ್ವಾಪುರದಲ್ಲಿ ಹಸ್ತಾಂತರಿಸಲಾಯಿತು. ಆರ್.ಎಸ್.ಎಸ್ ನ ಹಿರಿಯರಾದ ಸೂ ರಾಮಣ್ಣಾ ಜಿ, ಸುರೇಶ ಸಂಕಲ್ಪ ಶೆಟ್ಟರ, ಮಲ್ಲಿಕಾರ್ಜುನ ಸಾವಕಾರ, ದತ್ತಮೂರ್ತಿ ಕುಲಕರ್ಣಿ, ವಕ್ತಾರ ರವಿ ನಾಯಕ, ವಿನೋದ ರೇವಣಕರ್, ಶ್ರೀಮತಿ ರೂಪ ಶೆಟ್ಟಿ, ಅಕ್ಕಮಹಾದೇವಿ ಹೆಗಡೆ, ವಿಜಯಲಕ್ಷ್ಮಿ ತಿಮಲಿ, ಉಮಾ ಮುಕುಂದ, ಭಾರತಿ ಟಪಾಲ್, ಕಿರಣ ಗಡ ಮೊದಲಾದವರು ಉಪಸ್ಥಿತರಿದ್ದರು.