ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ನಿನ್ನೆ ಮಂಗಳವಾರ ಪೆÇಲೀಸ್ ಠಾಣೆಯ ಆವರಣದಲ್ಲಿ ಪೆÇಲೀಸ್ ಸಿಬ್ಬಂದಿಗೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಶೀಕರಣಿ ಮತ್ತು ಹೋಳಿಗೆ ಸವಿಯೂಟ ಬಡಿಸುವ ಮೂಲಕ ವಾರಿಯರ್ಸ್‍ಗಳ ಕಾರ್ಯಕ್ಕೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಿಪಿಐ ವಿಕಾಸ್ ಲಮಾಣಿ, ಪಿಎಸ್‍ಐ ಶಿವಯೋಗಿ ಲೋಹಾರ್, ಗೋನಾಳ ಗ್ರಾಪಂ ಅಧ್ಯಕ್ಷೆ ಸುಶಿಲವ್ವ ಮರಿಲಿಂಗನಗೌಡರ್, ಗಂಗಾಧರ ಮಾದರ, ಚಂದ್ರು ತಳವಾರ್, ಪದ್ಮರಾಜ್ ಪಾಟೀಲ್, ಮಲ್ಲನಗೌಡ ಕೆಂಚ್ಚನಗೌಡರ, ಅಣ್ಣಪ ರಾಮಗಿರಿ, ಕರಿಯಪ್ಪಗೌಡ ಹೊಸಗೌಡರ, ಯಲಪ್ಪ ಕಠಾರಿ ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.