ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ 57(69)ರಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲಿ ವಾರ್ಡಿನ ಪೌರ ಕಾರ್ಮಿಕರಗೆ ಕ್ಷೇತ್ರದ ಕಾರ್ಯದರ್ಶಿ ಅಣ್ಣಪ್ಪ ಗೋಕಾಕ ಅವರ ನೇತೃತ್ವದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಸಹೋದರರಾದ ಗೋವಿಂದ ಜೋಶಿ ಅವರ ಸಮ್ಮುಖದಲ್ಲಿ ಆಹಾರದ ಕಿಟ್ಟನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಹು-ಧಾ ಪೂರ್ವ ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠ, ಚಂದ್ರಶೇಖರ ಗೋಕಾಕ್, ವಿನಯ ಸಜ್ಜನರ, ಮಾರುತಿ ಚಾಕಲಬ್ಬಿ, ಪ್ರವೀಣ ಕುಬಸದ, ಗಣೇಶ ಅಮರಾವತಿ, ಬಸಪ್ಪ ಮಾದರ, ಹು-ಧಾ ಪೂರ್ವ ಮಂಡಲ ವಕ್ತಾರ ಲಕ್ಷ್ಮೀಕಾಂತ ಘೋಡಕೆ ಹಾಗೂ 57ನೇ ವಾರ್ಡಿನ ಪ್ರಮುಖರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.