
(ಸಂಜೆವಾಣಿ ವಾರ್ತೆ)
ಬೀದರ್:ಮಾ.19: ಸ್ಥಳಿಯ ಶಾಸಕ ರಹೀಂ ಖಾನ್ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡದ ಕಾರಣ ಕೇಂದ್ರ ಸರ್ಕಾರ ಮಂಜೂರು ಮಾಡಿದ್ದ 2,400 ಮನೆಗಳ ಅನುದಾನ ಮರಳಿ ಪಡೆದುಕೊಂಡಿದೆ.
ಸ್ವತಃ ಜಿಲ್ಲಾಧಿಕಾರಿ ಅವರೇ ಇಬ್ಬರೂ ಶಾಸಕರಿಗೆ ಫೆÇೀನ್ ಮಾಡಿ ಫಲಾನುಭವಿಗಳ ಆಯ್ಕೆ ಮಾಡದಿದ್ದಲ್ಲಿ ವಸತಿ ಯೋಜನೆಗಳ ಹಣ ಮರಳಿ ಹೋಗಲಿದೆ ಎಂದು ತಿಳಿಸಿದರೂ ಫಲಾನುಭವಿಗಳ ಆಯ್ಕೆ ಪಟ್ಟಿ ಅಂತಿಮಗೊಳಿಸಲಿಲ್ಲ.
ಹೀಗಾಗಿ ಕೇಂದ್ರ ಸರ್ಕಾರ ವಸತಿ ಯೋಜನೆಯ ಮನೆಗಳನ್ನು ವಾಪಸ್ ಪಡೆದಿದೆ ಎಂದು ಅಧಿಕಾರಿಗಳು ಹೇಳಿದರು.
ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಬಹಿರಂಗ ಪಡಿಸಿದರು.
ಔರಾದ್, ಭಾಲ್ಕಿ, ಹುಮನಾಬಾದ್ ತಾಲ್ಲೂಕಿನ ವಸತಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಸಕಾಲಕ್ಕೆ ಬಂದ ಕಾರಣ ಅರ್ಹರಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ. ರಾಜೀವ್ ಗಾಂಧಿ ಹೌಸಿಂಗ್ ಕಾಪೆರ್Çೀರೇಷನ್ ನಮೂನೆ ಪ್ರಕಾರ ಪಟ್ಟಿ ತಯಾರಿಸಿ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
2021-2022ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಗೆ ಮಂಜೂರಾದ 5,454 ಮನೆಗಳ ಪೈಕಿಜಿಯೊ ಟ್ಯಾಗ್ ಮೂಲಕ 1,331 ಮನೆಗಳ ಅನುಮೋದನೆ ಪಡೆಯಲಾಗಿದೆ. ಬಾಕಿ ಉಳಿದ 4,123 ಫಲಾನುಭವಿಗಳ ಬಾಂಕ್ ಖಾತೆ ಸಂಖ್ಯೆ ನಮೂದಿಸಿ ನೋಂದಣಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ್ ಲಮಾಣಿ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಯೋಜನೆ ಹಾಗೂ ಬಸವ ವಸತಿ ಯೋಜನೆಯಡಿ ಜಿಲ್ಲೆಯ 185 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 7,060 ನಿವಾಸ ಮಂಜೂರು ಮಾಡಲಾಗಿದೆ. 6,445 ಫಲಾನುಭವಿಗಳ ಹೆಸರುಗಳನ್ನು ಆನ್‍ಲೈನ್‍ನಲ್ಲಿ ನೋಂದಣಿ ಮಾಡಲಾಗಿದೆ. 615 ಫಲಾನುಭವಿಗಳ ಅನುಮೋದನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು.
ವಸತಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆ:
ಬೀದರ್ ಜಿಲ್ಲೆಯಲ್ಲಿ 77 ವಸತಿ ನಿಲಯಗಳ ಪೈಕಿ 27 ವಸತಿ ನಿಲಯಗಳಿಗೆ ಮಾತ್ರ ವಾರ್ಡನ್‍ಗಳಿದ್ದಾರೆ. ಅಡುಗೆಯವರನ್ನು ನೇಮಕ ಮಾಡಿದ ಸಂದರ್ಭದಲ್ಲಿ ಹಲವು ತೊಂದರೆಗಳು ಎದುರುದಾದವು. ಕೆಲ ಕಡೆ ಎಫ್‍ಡಿಎಗಳು ಹಾಸ್ಟೆಲ್ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕೆಪಿಎಸ್‍ಸಿಯಿಂದ ನೇಮಕ ಆಗಬೇಕಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 77 ಬಿಸಿಎಂ ಹಾಸ್ಟೆಲ್‍ಗಳಿವೆ. 50 ಸ್ವಂತ ಕಟ್ಟಡದಲ್ಲಿ, ಎರಡು ಉಚಿತ ಕಟ್ಟಡದಲ್ಲಿ ಹಾಗೂ ಉಳಿದವು ಬಾಡಿಗೆ ಕಟ್ಟಡದಲ್ಲಿವೆ. 5,907 ಮಕ್ಕಳು ಪ್ರವೇಶ ಪಡೆದಿದ್ದಾರೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕುಲಕರ್ಣಿ ಮಾತನಾಡಿ, ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದವರಲ್ಲಿ 215 ವಿದ್ಯಾರ್ಥಿಗಳ ಅರ್ಜಿಗಳೇ ಆನ್‍ಲೈನ್‍ನಲ್ಲಿ ತೆರೆದುಕೊಂಡಿಲ್ಲ. 11 ಅರ್ಜಿಗಳು ತಿರಸ್ಕøತಗೊಂಡಿವೆ. ಉಳಿದವರಿಗೆ ಶಿಷ್ಯವೇತನ ಕೊಡಲಾಗಿದೆ ಎಂದರು.
ಜಿಲ್ಲೆಯಲ್ಲಿರುವ 19 ವಸತಿ ಶಾಲೆಗಳ ಪೈಕಿ 10 ಶಾಲೆಗಳಿಗೆ ಭೇಟಿಕೊಟ್ಟು ಪರಿಶೀಲಿಸಿದ್ದೇನೆ. ಪ್ರಸ್ತುತ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ವಸತಿ ನಿಲಯ ಹಾಗೂ ಮನೆಗಳಲ್ಲಿ ಇರುವ ವಿದ್ಯಾರ್ಥಿಗಳ ಫಲಿತಾಂಶದ ಸಮೀಕ್ಷೆ ನಡೆಸಿ ಯಾವ ಮಕ್ಕಳು ಚೆನ್ನಾಗಿ ಓದಿದ್ದಾರೆ ವರದಿ ಕೊಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಬಂದಿದ್ದರೆ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಾತನಾಡಿ, ಜಿಲ್ಲೆಯಲ್ಲಿ 153 ಅಂಗನವಾಡಿ ಕೇಂದ್ರಗಳಿವೆ. 27 ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ಮಂಜೂರಾಗಿದೆ. ಇನ್ನು ಕೆಲ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ದೊರಕಿಲ್ಲ ಎಂದು ಹೇಳಿದರು.
ನಿಧಾನ ಕಾಮಗಾರಿ, ಅಸಮಾಧಾನ:
ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು ಬಹಳಷ್ಟು ನಿಧಾನವಾಗಿ ಸಾಗಿವೆ. ಎರಡು ವರ್ಷದ ಹಿಂದಿನ ಕಾಮಗಾರಿ ಕಳೆದ ವರ್ಷ, ಕಳೆದ ವರ್ಷದ ಕಾಮಗಾರಿ ಈ ವರ್ಷ ಹಾಗೂ ಈ ವರ್ಷದ್ದು ಮುಂದಿನ ವರ್ಷಕ್ಕೆ ಮುಂದೂಡುತ್ತ ಹೋದರೆ ಹೇಗೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ ಪ್ರಶ್ನಿಸಿದರು.
ಅಧಿಕಾರಿಗಳು ವಹಿಸಿಕೊಟ್ಟಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಾತನಾಡಿ, ಈಗಾಗಲೇ 42 ಕಾಮಗಾರಿಗಳು ಮುಗಿದಿವೆ. 35 ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು.