24.79 ಕೋಟಿ ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ ಉದ್ಘಾಟನೆ: ಶಾಸಕ ರಾಜಶೇಖರ್ ಪಾಟೀಲ್

ಹುಮನಾಬಾದ್: ಜ.14:ಕಿತ್ತೂರುರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಯ ಮೇಲ್ವಿಚಾರಕರು, ಅಧಿಕಾರಿಗಳು ವಸತಿ ನಿಲಯದ ಮಕ್ಕಳಿಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಕೊಡುವುದರ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸಬೇಕು ಎಂದು ಹಾಲಿ ಶಾಸಕ ರಾಜಶೇಖರ್ ಪಾಟೀಲ್ ಹೇಳಿದರು.
ತಾಲೂಕಿನ ಘಾಟಬೋರಳ ಗ್ರಾಮದಲ್ಲಿ ಕರ್ನಾಟಕ ವಸತಿ ಶಿಕ್ಷಣಸಂಸ್ಥೆಗಳಸ0ಘ ಬೆಂಗಳೂರು ವತಿಯಿ0ದ 6 ಎಕರೆಯಲ್ಲಿ 24.79 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ (ಎಸ್.ಸಿ) ನೂತನ ಕಟ್ಟಡಹಾಗೂರು.42 ಲಕ್ಷದ ಪಶು ಸಂಗೋಪನೆ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಒಂದುವಾರದ ಹಿಂದೆ ಬೀದರ್ ಉತ್ಸವಕ್ಕೆರಾಜ್ಯದ ಮುಖ್ಯಮ0ತ್ರಿಗಳು ಆಗಮಿಸಿದಾಗ ಕ್ಷೇತ್ರದ ಅಭಿವೃದ್ಧಿ ಕುರಿತು ವಿಷಯ ಪ್ರಸ್ತಾಪಿಸಿದಾಗ ಅವರು ಹೆಚ್ಚುವರಿಯಾಗಿ ರು.50 ಕೋಟಿ ಅನುದಾನಘೋಷಿಸಿದ್ದಾರೆ. ಘಾಟಬೋರಳ ಗ್ರಾಮಕ್ಕೆ ರು.6.81 ಕೋಟಿ ವೆಚ್ಚದಲ್ಲಿ ಜೆಜೆಎಂ ಕಾಮಗಾರಿ
ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಜತೆಗೆ ಘಾಟಬೋರಳ, ದುಬಲಗುಂಡಿ, ಹುಮನಾಬಾದಗೆ ಮೂರು ಆ0ಬುಲೆನ್ಸ್ ನೀಡುವ ಭರವಸ ನೀಡಿದರು

ವೀರಭದ್ರೇಶ್ವರ ಜಾತ್ರೆ ಬಳಿಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಓಡಾಡಿ ಅಭಿವೃದ್ಧಿ ಕಾರ್ಯ ವೀಕ್ಷಿಸಿ ಬಳಿಕ ಮತದಾರರ ಕೈಯಲ್ಲಿ ತಕ್ಕಡಿ ನೀಡುವೆ ಎಂದು ಪಾಟೀಲ್ ಹೇಳಿದರು.
ಪ್ರಿಯಾಂಕ್ ಖರ್ಗೆಗೆ ಅಭಿನಂದನೆ: ಇಂತಹ ಭವ್ಯ ವಾದ ಕಟ್ಟಡನಿರ್ಮಾಣಕ್ಕೆ ಹಿಂದಿನ ಸಮಾಜಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರ ಆಸಕ್ತಿಗೆ ನಾವು ಅಭಿನ0ದನೆ ಸಲ್ಲಿಸಬೇಕು. ವಸತಿ ನಿಲಯ ನೂರಾರು ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯದ ಭದ್ರ ಬುನಾ ಧಿಯಾಗಿ ನಿಂತಿದೆ. ವಸತಿ ನಿಲಯದ ಆವರಣದಲ್ಲಿ ಸ್ವಚ್ಛ ವಾತಾವರಣ, ಉತ್ತಮ ಪರಿಸರ, ಸುವ್ಯವಸ್ಥಿತ ಗ್ರಂಥಾಲಯ, ಅಡುಗೆ ಕೋಣೆ, ಕಂಪ್ಯೂಟರ್ ಕೋಣೆ, ಬೆಡ್, ವಿದ್ಯಾರ್ಥಿನಿಯರ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಸೇರಿದಂತೆ ಅತ್ಯಾಕರ್ಷಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಎಲ್ಲರನ್ನೂ
ಬೆಂಗಳೂರು ಎ0ದು ನೆನ್ನೆಪಿಸಿಕೊಳ್ಳುವ ವಾತಾವರಣ ದಲ್ಲಿ ಬಡಮಕ್ಕಳಿಗೆ ಗುಣಮಟ್ಟದಶಿಕ್ಷಣ ಪಡೆದುಕೊಂ ಡು ಉನ್ನತ ಹುದ್ದೆಗಳನ್ನು ಅಲಂಕರಿಸಿ ತಂದೆ ತಾಯಿ ಯ ಕನಸು ಸಕಾರಗೊಳಿಸಬೇಕು ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ, ಗ್ರಾಪಂ ಅಧ್ಯಕ್ಷ ಸಿದ್ದಾರ್ಥ ಪರಾಂಜಪೆ. ಮಾಜಿ ಜಿಪಂ ಸದಸ್ಯ ಡಾ.ಪ್ರಕಾಶ ಪಾಟೀಲ್ ಮಾತನಾಡಿದರು.
ಎಂಎಲ್ಸಿ ಭೀಮರಾವ ಪಾಟೀಲ್, ಟಿಎಪಿಸಿ ಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ಪಿಕೆಪಿಎಸ್ ಅಧ್ಯಕ್ಷ ಅಭಿಜೀತ ಪಾಟೀಲ್, ತಹಸೀಲ್ದಾರ ಡಾ. ಪ್ರದೀಪಕುಮಾರ ಹಿರೇಮಠ, ಜ್ಞಾನೇಶ್ವರ ಭೋಗ್ಯ ರಂಜೀತ್ ಮಾನಕರ, ರಾಜಕುಮಾರ ಪಾಟೀಲ್, ಹಳ್ಳಿಖೇಡ ( ಬಿ)ಪುರಸಭೆಅಧ್ಯಕ್ಷನಾಗರಾಜಹಿಬಾರೆ, ಮಹಾಂತಯ್ಯ ತೀರ್ಥ, ಅಪ್ಪರಮಿಯ್ಯ, ತಾ.ಪಂ ಅಧಿಕಾರಿ ಕೀರಣ ಪಾಟೀಲ, ಡಾ ಗೋವಿಂದ, ಗಿರಿಶ ರಂಜೋಳಕರ ಇತರರಿದ್ದರು.