24 ರಂದು ತಾಳಿಕೋಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ತಾಳಿಕೋಟೆ:ಸೆ.20: ದೇವಿಕಾ ಪೌಂಡೇಶನ್ ಬೆಂಗಳೂರ(ಮುದ್ದೇಬಿಹಾಳ) ಹಾಗೂ ವೀರಶೈವ ವಿದ್ಯಾವರ್ದಕ ಸಂಘ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ರೋಗಗಳ ಉಚಿತ ತಪಾಸಣಾ ಶಿಬಿರವನ್ನು ಇದೇ ದಿ. 24-9-2022 ಶನಿವಾರರಂದು ಜರುಗಲಿದೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಎಸ್.ಕೆ.ಕಾಲೇಜ್ ಗಂಡು ಮಕ್ಕಳ ವಸತಿ ನಿಲಯದಲ್ಲಿ ಜರುಗಲಿರುವ ಈ ಶಿಬಿರದಲ್ಲಿ ಹೃದಯ ರೋಗ ಕಾಯಿಲೆ, ನರರೋಗ, ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆ, ಇವುಗಳನ್ನೊಳಗೊಂಡು ಇನ್ನಿತರ ಕಾಯಿಲೆಗಳ ತಪಾಸಣಾ ಕಾರ್ಯ ನಡೆಯಲಿದೆ.

ಈ ಶಿಬಿರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ತಜ್ಞವೈದ್ಯರು ಆಗಮಿಸಿ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿದ್ದಾರಲ್ಲದೇ ಹೆಚ್ಚಿನ ರೋಗ ಕಂಡುಬಂದಲ್ಲಿ ಅಂತವರಿಗೆ ಸ್ವತಃ ವೈದ್ಯರೇ ಅಂಬ್ಯೂಲೇನ್ಸ್‍ನಲ್ಲಿ ಬೆಂಗಳೂರಿಗೆ ಕರೆದೊಯ್ದು ಉಚಿತ ತಪಾಸಣೆ ಹಾಗೂ ಔಷದೋಪಚಾರ ಮಾಡಿ ಕಳುಹಿಸಿಕೊಡಲಿದ್ದಾರೆ.

ರೋಗ ತಪಾಸಣೆಗೆ ಆಗಮಿಸುವವರು ತಮ್ಮ ಆದಾರ ಕಾರ್ಡ, ಬಿಪಿಎಲ್ ಕಾರ್ಡನ್ನು ತಪ್ಪದೇ ತರಬೇಕು, ರೋಗ ತಪಾಸಣೆಗೆ ಆಗಮಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ಈ ಶಿಬಿರದ ನಂತರ ವಿಜಯಪೂರ ಜಿಲ್ಲೆಯ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಭಾಗದ ಪ್ರಮುಖ ಸ್ಥಳಗಳಲ್ಲಿ ಇಂತಹದೇ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತದೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಪ್ರಕಟನೆ ಮೂಲಕ ತಿಳಿಸಿದ್ದಾರೆ.