24 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ 2ನೇ ಹಂತದ ಚುನಾವಣೆಗೆ ಸಿದ್ಧತೆ

ಹನೂರು, ಡಿ.26: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ – 2020 ಹಿನ್ನಲೆ ಹನೂರು ತಾಲ್ಲೂಕಿನಾದ್ಯಂತ 25 ಗ್ರಾಮ ಪಂಚಾಯಿತಿಗಳಲ್ಲಿ ಕುರಟ್ಟಿ ಹೊಸೂರು ಗ್ರಾ.ಪಂ ಹೊರತು ಪಡಿಸಿ ಇನ್ನು 24 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಕ್ಕೆ ಎರಡನೇ ಹಂತದ ಚುನಾವಣೆ ಸಿದ್ಧತೆಯನ್ನು ಹನೂರಿನ ಜಿ.ವಿ ಗೌಡ ಮತ್ತು ಕ್ರಿಸ್ತ ರಾಜ ಸ್ಕೂಲ್ ನಲ್ಲಿ ಡಿ.27 ರಂದು ಚುನಾವಣೆ ಜರುಗಲಿದ್ದು ಚುನಾವಣಾಧಿಕಾರಿಗಳು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ಹನೂರು ತಾಲ್ಲೂಕು ವ್ಯಾಪ್ತಿಯ 24 ಗ್ರಾಮ ಪಂಚಾಯಿತಿಗಳಿಗೆ ಒಟ್ಟು 419 ಸದಸ್ಯರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯ ಕೊನೆ ದಿನ ಒಟ್ಟು 1531 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿತ್ತು. ಡಿ.17 ರಂದು ನಾಮಪತ್ರ ಪರಿಶೀಲನೆ ನೆಡೆಸಿದ ಹಿನ್ನಲೆ ನಾಮಪತ್ರ ಸಲ್ಲಿಸಿದ್ದ ಒಟ್ಟು 1531ನಾಮಪತ್ರಗಳಲ್ಲಿ 41 ನಾಮಪತ್ರಗಳು ತಿರಸ್ಕೃತವಾಗಿದೆ. ಒಟ್ಟಾರೆ ಹನೂರು ತಾಲ್ಲೂಕಿನ 24 ಗ್ರಾಮ ಪಂಚಾಯಿತಿಯ ಒಟ್ಟು 419 ಸದಸ್ಯರ ಸ್ಥಾನಕ್ಕೆ ಒಟ್ಟು 1490 ಕ್ರಮಬದ್ಧ ನಾಮನಿರ್ದೇಶಿತ ಅಭ್ಯರ್ಥಿಗಳಾಗಿದ್ದರು.
19 ಡಿ 2020 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನದಂದು 24 ಗ್ರಾಮ ಪಂಚಾಯಿತಿಗಳ ಪೈಕಿ ಒಟ್ಟು 355 ಅಭ್ಯರ್ಥಿಗಳು ಉಮೇದುವಾರಿಕೆಗಳನ್ನು ಹಿಂಪಡೆದಿದದ್ದು ಒಟ್ಟು 9 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
1 ನಾಮ ಪತ್ರ ಸಲ್ಲಿಸದೆ ಇರುವ ಸ್ಥಾನ, ಇದೀಗ ಒಟ್ಟಾರೆ 1126 ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ದರಾಗಿದ್ದಾರೆ.
ಚುನಾವಣಾ ಪ್ರಚಾರ : ಹನೂರು ತಾಲ್ಲೂಕಿನ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಸ್ಪರ್ದಿಸಿ ಕಣದಲ್ಲಿರು ಅಭ್ಯರ್ಥಿಗಳು ಈಗಾಗಲೇ ತಮ್ಮ ತಮ್ಮ ವಾರ್ಡ್ ಗಳಲ್ಲಿ ಪ್ರಚಾರ ಮಾಡುತಿದ್ದು. ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸಹ ಮುಖಂಡರ ಜೊತೆ ಗೂಡಿ ಮನೆ ಮನೆ ತೆರಳಿ ಕರ ಪತ್ರಗಳನ್ನು ನೀಡುವ ಮೂಲಕ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳ ಹಿಂದೆ ಅಭ್ಯರ್ಥಿಗಳ ಪರ ಪ್ರಚಾರವು ವಿನೂತನವಾಗಿ ಕಂಸಾಳೆ ಬಡಿದು ಮತ ಭಿಕ್ಷೆ ಬೇಡಿದ್ದು ಉಂಟು. ಇನ್ನು ಕೆಲವುಅಭ್ಯರ್ಥಿಗಳಿಗೆ ನೀಡಿರುವ ಗುರುತುಗಳ ವಸ್ತುಗಳಿಗೆ ಪೂಜೆ ಸಲ್ಲಿಸಿರುವ ಘಟನೆಗಳು ನೆಡೆದಿದ್ದು ಮತದಾರರ ಗಮನ ಸೆಳೆಯುತ್ತಾ ಗ್ರಾ.ಪಂ ಚುನಾವಣೆಯಲ್ಲಿ ಗೆಲ್ಲಲೆ ಬೇಕೆಂದು ಇನ್ನಿಲ್ಲದ ಕಸರತ್ತು ನೆಡೆಸುತ್ತಿದ್ದಾರೆ.