24ರಂದು ಪ್ರತಿಭಟನೆ

ವಿಜಯಪುರ:ಮಾ.14: ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕಾ ಸಮಿತಿ ವಿಜಯಪುರ ಜಿಲ್ಲಾಧ್ಯಕ್ಷರಾದ ಪರಸರಾಮ ಮಂಡೂರ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ ಮಾತನಾಡಿ 2017-18ನೇ ಇಸ್ವಿಯಲ್ಲಿ ಕಂದಾಯ ಸಚಿವರಾದ ಕಾಗೋಡ ತಿಮ್ಮಪ್ಪನವರು ಬಗರ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡಬೇಕೆಂದು ಕಮಿಟಿ ರಚನೆ ಮಾಡಿದ್ದರು. ಆದರೆ ಈಗಿನ ಕಂದಾಯ ಸಚಿವರು 2022ರ ಕಂದಾಯ ಕಾನೂನಿನಲ್ಲಿ ಈಗಿನ ಸರಕಾರ ಕರ್ನಾಟಕದಲ್ಲಿ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿ ಫಾರ್ಮ ನಂ. 57 ತುಂಬಿದ್ದನ್ನು ರದ್ದು ಮಾಡಿದ್ದಾರೆ. ಅಕ್ರಮ-ಸಕ್ರಮ ಕಮಿಟಿಗಳನ್ನು ರಚನೆ ಮಾಡದೆ ಇರುವುದು ಸರಕಾರ ವಿಫಲವಾಗಿದೆ. ಕೂಡಲೇ ಸರಕಾರ ಅಕ್ರಮ ಸಕ್ರಮ ಕಮಿಟಿ ರಚನೆ ಮಾಡಬೇಕು. ಹಾಗೂ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ಕೂಡಲೇ ಹಕ್ಕು ಪತ್ರ ಕೊಡಬೇಕೆಂದು ದಿನಾಂಕ 24-3-2023 ರಂದು ನಗರದ ಅಂಬೇಡ್ಕರ ವೃತ್ತದಿಂದ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಗುಡಿಮನಿ ಮಾತನಾಡಿ ಬೇನಾಳ ಆರ್.ಎಸ್. ಗ್ರಾಮದ ದಲಿತರು ಹಾಗೂ ಬಡವರು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಸರಕಾರದ ಆದೇಶದ ಪ್ರಕಾರ ಫಾರ್ಮ ನಂ. 57 ತುಂಬಿದ್ದು ಸುಮಾರು ವರ್ಷಗಳಿಂದ ಬೇನಾಳ ಗ್ರಾಮದ ಸರ್ವೆ ನಂ. 221 ರಲ್ಲಿ 109 ಎಕರೆ 34 ಗುಂಟೆ ಜಮೀನಿನಲ್ಲಿ ಸಾಗುವಳಿ ಮಾಡುತ್ತ ಬಂದಿದ್ದಾರೆ. ಇವರಿಗೆ ಸರಕಾರದ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 2 ಎಕರೆಯಂತೆ ಸಾಗುವಳಿ ಮಾಡುವದಕ್ಕೆ ಹಗೂ ಧನಕರು ಹಾಗೂ ಕುರಿಗಳ ಮೇಯಿಸುವದಕ್ಕೆ ಊರಿನ ಎಲ್ಲ ಹಿರಿಯರು ಯಾವುದೇ ತಂಟೆ ತಕರಾರು ಇರುವದಿಲ್ಲ ಇವರಿಗೆ ಸಾಗುವಳಿ ಮಾಡುತ್ತಿದ್ದಾರೆ ಕೂಡಲೇ ಹಕ್ಕುಪತ್ರ ವಿತರಿಸಬೇಕು ಎಂದರು.

ಈ ಸಂದರ್ಭದಲ್ಲಿ ಸೋಮನಿಂಗ ತಳಕೇರಿ, ಶರಣಗೌಡ ಬಿರಾದಾರ, ಹುಸೇನಸಾಬ ದೊಡಮನಿ, ರಾಮಣ್ಣ ತಳವಾರ, ಭೀಮಪ್ಪ ಮಾದರ ಇನ್ನಿತರರು ಉಪಸ್ಥಿತರಿದ್ದರು.