24ರಂದು ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಆಯ್ಕೆ

ಬೀದರ್:ನ.20: ಈ ತಿಂಗಳ 24ರಂದು ಹುಮನಾಬಾದ್ ತಾಲೂಕಿನ ಹಳ್ಲಿಖೇಡ್(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಬೆಳಿಗ್ಗೆ 9 ಗಂಟೆಗೆ ಯುವ ಸಬಲೀಕರನ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರ ಕಾಳಸರತುಗಾಂವ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಕಾರ್ಯಕ್ರಮ ಹಮ್ಮಿಕೊಳ್ಲಲಾಗಿದೆ.

ಈ ಸಂಬಂಧ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜಾನಪದ ಸ್ಪರ್ಧೆಯಲ್ಲಿ 4ರಿಂದ 8 ಜನ ಭಾಗವಹಿಸಬೇಕಿದ್ದು 10 ನಿಮಿಷ ಇದು ಗುಂಪು ಸ್ಪರ್ಧೆಯಾಗಿದೆ. ಜಾನಪದ ಗೀತೆ 7 ನಿಮಿಷದ್ದಾಗಿರುತ್ತದೆ. ಇದರಲ್ಲಿ 4ರಿಂದ 8 ಜನ ಭಾಗವಹಿಸಬೇಕಾಗಿರುತ್ತದೆ. ವಯಕ್ತಿಕವಾಗಿ ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಏಕಾಂಕ ನಾಟಕ ಸ್ಪರ್ಧೆಯಲ್ಲಿ ಒಬ್ಬರು ಭಾಗವಹಿಸಬಹುದಿದ್ದು, 5 ನಿಮಿಷ ಕಾಲಾವಕಾಶ ಇರುತ್ತದೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯನವು ವಯಕ್ತಿಕ ಸ್ಪರ್ಧೆಯಾಗಿದ್ದು, 15 ನಿಮಿಷ ಕಾಲಾವಕಾಶ ಇದಾಗಿರುತ್ತದೆ. ವಯಕ್ತಿಕ ಸ್ಪರ್ಧೆಗಳಲ್ಲಿ ಶಾಸ್ತ್ರೀಯ ವಾದ್ಯಗಳಾದ ಸಿತಾರ್, ಕೊಳಲು, ವೀಣೇ, ತಬಲಾ ಹಾಗೂ ಮೃದಂಗ ಈ ಎಲ್ಲ ಸ್ಪರ್ಧೆಗಳಿಗೆ ತಲಾ 10 ನಿಮಿಷ ಕಾಲಾವಕಾಶ ಇರುತ್ತದೆ. ಶಾಸ್ತ್ರೀಯ ನೃತ್ಯದಲ್ಲಿ ಭರತನಾಟ್ಯ, ಒಡಿಸ್ಸಿ, ಮಣಿಪುರಿ, ಕುಚಿಪುಡಿ ಹಾಗೂ ಕಥಕ್, ಹಾರ್ಮೊನಿಯಮ್, ಗಿಟಾರ್ ಹಾಗೂ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಆಶು ಭಾಷಣ ಸ್ಪರ್ಧೆ ಇರುತ್ತವೆ. ಇವು ಸಹ ವಯಕ್ತಿಕ ಸ್ಪರ್ದೆಗಳಾಗಿದ್ದು, ಇದಕ್ಕೂ ಸಹ ತಲಾ 10 ನಿಮಿಷ ಕಾಲಾವಕಾಶ ಇರುತ್ತದೆ. ಈ ಮೇಲಿನ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಕೆಳಕಂಡ ಸೂಚನೆಗಳನ್ನು ಪಾಲಿಸತಕ್ಕದ್ದು. ಭಾಗವಹಿಸುವ ಅಭ್ಯರ್ಥಿಗಳು 15 ರಿಂದ 29ರ ವಯೋಮಿತಿಯ ಯುವಕ, ಯುವತಿಯರು ಮತ್ತು ಕಲಾ ತಂಡಗಳು ಭಾಗವಹಿಸಬಹುದ್ದಾಗಿರುತ್ತದೆ ಜಿಲ್ಲಾ ಮಟ್ಟದ ಯುವಜನೋತ್ಸವ ಪಾಲಿಸುವುದು, ಸ್ಪರ್ಧೆಗೆ ಅಪಾರಿರುವ ವಸ್ತುಗಳನ್ನು ಸಮವಸ್ತ್ರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು, ಇಲಾಖೆಯಿಂದ ಯಾವುದೇ ಪರಿಕರಗಳ ವ್ಯವಸ್ಥೆ ಮಾಡಲಾಗುವದಿಲ್ಲ, ಭಾಗವಹಿಸುವವರು ಪಾಲುವ ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಪಾಸ್, ಪೋರ್ಟ್ ಅಳತೆಯ ಭಾವಚಿತ್ರ, ಜನನ ಪ್ರಮಾಣ ಪತ್ರ ಮತ್ತು ಆಧಾರ್ ಗುರುತಿನಚೀಟಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಆಯ್ಕೆ ಪ್ರಕ್ರಿಯೆ ಸ್ಥಳದಲ್ಲಿ ಸಲ್ಲಿಸುವುದು. ಯುವಜನೋತ್ಸವ ಸ್ಪರ್ಧೆಯಲ್ಲಿ ಜಿಲ್ಲೆಯ ಸ್ಪರ್ಧಾಳುಗಳು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಅಥವಾ ಬೇರೆಜಿಲ್ಲೆಯಿಂದ ಈ ಜಿಲ್ಲೆಯಲ್ಲಿ ಭಾಗವಹಿಸುವಂತಿಲ್ಲ. ಕಡ್ಡಾಯವಾಗಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಇಲಾಖೆಯು ನೀಡುವ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳು ರಾಜ್ಯ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಸಾಮಾನ್ಯ ಬಸ್ ದರದ ಪ್ರಯಾಣಭತ್ಯೆ ನೀಡಲಾಗುವುದು. ಹಾಗಾಗಿ ಅರ್ಜಿ ನಮೂನೆಯಲ್ಲಿ ಬ್ಯಾಂಕ್ ಖಾತೆಯ ವಿವರಗಳನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವವರು ಶಿಸ್ತಿನಿಂದ ವರ್ತಿಸುವುದು. ಅಶಿಸ್ತಿನಿಂದ ವರ್ತಿಸುವುದು ಕಂಡುಬಂದಲ್ಲಿ ಅಂತಹವರನ್ನು ಆಯ್ಕೆಯಿಂದ ಅನರ್ಹಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ತಾಲ್ಲೂಕು ಕೇಂದ್ರದಿಂದ ಸಾಮಾನ್ಯ ಬಸ್ ಪ್ರಯಾಣದರವನ್ನು ನೀಡಲಾಗುತ್ತದೆ. ಪ್ರಯಾಣಭತ್ಯೆ ಪಡೆಯಲು ಸ್ಪರ್ಧಾಳುಗಳು ಕಡ್ಡಾಯವಾಗಿ ಬಸ್ ಟಿಕೇಟ್ ಸಲ್ಲಿಸುವುದು. ಜಾನಪದ ನೃತ್ಯಕ್ಕೆ ಪರಿಕರಗಳ ಸಾಗಾಣಿಕೆಗೆ ಮಾತ್ರ ಸಾಮಾನ್ಯದರವನ್ನು ನೀಡಲಾಗುತ್ತದೆ. ಒಬ್ಬ ಸ್ಪರ್ಧಾಳು 3 ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸತಕ್ಕದ್ದು, ಒಂದು ಗುಂಪು ಮತ್ತು ಎರಡು ವೈಯಕ್ತಿಕ ಮಾತ್ರ.

ವಿ. ಸೂ:- ಜಿಲ್ಲಾ ಮಟ್ಟದಲ್ಲಿ ನಡೆಯುವ ಎಲ್ಲಾ ಸ್ಪರ್ಧೆಗಳಿಗೆ ಬಹುಮಾನ ಮೊತ್ತವನ್ನು ನೀಡಲಾಗುವುದು.

ಕೋವಿಡ್-19 ರ ಸೂಚನೆಗಳು:- ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಕೋವಿಡ್-19ರ ಲಕ್ಷಣವಿಲ್ಲದೆ ಇರುವವರು ಮಾತ್ರ ಈ ಸ್ಪರ್ಧೆಗಳಲ್ಲಿ ಭಾಗವಹಿಸುವುದು. ವಯೋಮಿತಿಯ ಸ್ಪರ್ಧಾಳುಗಳು ಕಡ್ಡಾಯವಾಗಿ ಕೋವಿಡ್-19ರ ಲಸಿಕೆ ಪಡೆದಿರುಬೇಕು. ಹೆಚ್ಚಿನ ವಿವರಗಳಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ: 9880315461 ಅಥವಾ 9448604824ನಲ್ಲಿ ಸಮಪರ್ಕಿಸುವುದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲಿ ತಿಳಿಸಿದ್ದಾರೆ.