ಧಾರವಾಡದಲ್ಲಿನ ಸಾರಿಗೆ ನೌಕರರ ಕೂಟದ ಕಚೇರಿಯಲ್ಲಿ ಸೇವಾನಿವೃತ್ತಿ ಹೊಂದಿದ ನಿರ್ವಾಹಕ ವಿ.ಜಿ.ಕೊಂಗವಾಡ ಅವರನ್ನು ವಾಕರಸಾ ಸಂಸ್ಥೆಯ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್.ನೀರಲಕೇರಿ ಅವರ ನೇತೃತ್ವದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.ಸಮಾಜ ಸೇವಕ ಸಿದ್ದಣ್ಣ ಕಂಬಾರ,ಕೂಟದ ಪದಾಧಿಕಾರಿಗಳಾದ ಪಿ.ಎಫ್.ಕೋಲಕಾರ, ಸಂಜೀವ ಬಾಗೋಜಿ, ಗೋಪಾಲ ಲಮಾನಿ, ಅಂಜನೇಯ ಕಮ್ಮಾರ, ಮಹೇಂದ್ರ ಸಾಳ್ವೆ ಮತ್ತಿತರರು ಇದ್ದರು.