ಮುನವಳ್ಳಿ ಪಟ್ಟಣದ ಪ್ರಮುಖ ಎಲ್ಲ ಆಸ್ಪತ್ರೆಗಳಲ್ಲಿ ಇರುವ ರೋಗಿಗಳಿಗೆ ಹಾಗೂ ಬೀದಿ ವ್ಯಾಪಾರಸ್ಥರಿಗೆ ಕಾಂಗ್ರೆಸ್ ಮುಖಂಡ ವಿಶ್ವಾಸ್ ವೈದ್ಯರವರ ಸಂಯೋಜನೆಯಿಂದ ಆಹಾರದ ಪೊಟ್ಟಣ ಹಾಗೂ ನೀರಿನ ಬಾಟಲ್‍ಗಳನ್ನು ವಿತರಿಸಲಾಯಿತು. ಪುರಸಭೆ ಸದಸ್ಯರಾದ ಮೀರಾಸಾಬ ವಟ್ನಾಳ, ಪರುಶುರಾಮ ಗಂಟಿ, ಶಿಂಗಯ್ಯ ಹೀರೇಮಠ, ಡಾ. ರವಿ ಹನಸಿ, ಡಾ. ಬಸೀರ ಅಹಮ್ಮದ್, ಬೈರಕದಾರ, ಯಶವಂತ ಯಲಿಗಾರ, ಪ್ರವೀಣ ರಾಮಪ್ಪನವರ, ಪ್ರಸಾದ ವಿರಪಯ್ಯನವರಮಠ, ಪಂಚು ಬಾರಕೇರ, ಬಸು ಕಟಕೋಳ, ವಿನಾಯಕ ಕಟ್ಟೆಕಾರ, ಆನಂದ ಧಾರವಾಡ, ನಾಗನಗೌಡ ಮಲಗೌಡರ, ಬಸು ಗೋಮಾಡಿ, ದಿಲಾವರ ಮುಗಟಖಾನ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.