ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಹಾಗೂ ಅವರ ಆಪ್ತರಿಂದ ಕೋವಿಡ್ ರೋಗಿಗಳ ಆರೈಕೆಗಾಗಿ ನೀಡಲಾದ ಔಷಧಿ ಕಿಟ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಂದು ಸರ್ಕ್ಯೂಟ್ ಹೌಸ ನಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಶಾಸಕ ಶಂಕರಪಾಟೀಲ್ ಮುನೇನಕೊಪ್ಪ, ವಿಶ್ವನಾಥ ಸಜ್ಜನರ ಸಹೋದರ ಮಲ್ಲಿಕಾರ್ಜುನ ಸಜ್ಜನರ ಸೇರಿದಂತೆ ಮುಂತಾದವರು ಇದ್ದರು.