ಬಾದಾಮಿವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಬಾದಾಮಿ ನಗರ, ಕೆರೂರ, ಗುಳೇದಗುಡ್ಡ ನಗರದ ಸಾರ್ವಜನಿಕ ಆಸ್ಪತ್ರೆಗಳಿಗೆ ಕೋವಿಡ್ ಸೊಂಕು ನಿರ್ವಹಣೆ ಅಗತ್ಯಕ್ಕೆ 100 ಬೆಡ್‍ಗಳು ಮತ್ತು ಕಾಟ್‍ಗಳನ್ನು ವಿರೋಧ ಪಕ್ಷದ ನಾಯಕ, ಶಾಸಕ ಸಿದ್ದರಾಮಯ್ಯ ಉದ್ಘಾಟಿಸಿದರು. ಪರೋಪಕಾರಿ ಫೌಂಡೇಶನ್ ಅಧ್ಯಕ್ಷ ಡಾ. ಭರತಕುಮಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್ ಜಿ ನಂಜಯ್ಯನಮಠ, ಮಾಜಿ ಶಾಸಕ ಎಚ್ ವಾಯ್ ಮೇಟಿ ಮುಖಂಡರಾದ ಮಹೇಶ ಎಸ್ ಹೊಸಗೌಡ್ರ, ಹೊಳೆಬಸು ಶೆಟ್ಟರ, ಎಂ.ಡಿ.ಯಲಿಗಾರ, ಎಂ.ಬಿ.ಹಂಗರಗಿ, ಪಿ.ಆರ್.ಗೌಡರ, ಡಾ.ಎಮ್.ಜಿ.ಕಿತ್ತಲಿ, ಮುಖಂಡ ಮಧು ಯಡ್ರಾಮಿ, ಪುರಸಭೆ ಸದಸ್ಯ ರಾಜಮಹ್ಮದ ಬಾಗವಾನ, ಶೈಲಾ ಚಟ್ಟರಕಿ, ಮಹಾಂತೇಶ ಹಟ್ಟಿ, ಸೇರಿದಂತೆ ಕಾರ್ಯಕರ್ತರು ತಾಲೂಕ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.