ಬಾದಾಮಿಯಲ್ಲಿ ಕೋವಿಡ್19 ಸಾಮಾನ್ಯ ಲಕ್ಷಣಗಳಿರುವವರಿಗೆ ಮತ್ತು ಕೊರೊನ ರೋಗಿಗಳಿಗೆ ಆಯುಷ್ಯ ಇಲಾಖೆಯ ವತಿಯಿಂದ ರೋಗ ನಿರೋಧಕ ಶಕ್ತಿಯನ್ನು ಹೆÀಚ್ಚಿಸುವ ಆಯುಷ್ ಕಿಟ್‍ಗಳನ್ನು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಅವರ ಮೂಲಕ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಹೋಮಿಯೋಪತಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಬಿ.ಕಂಬಾಳಿಮಠ, ರಪೀಕ್ ಖಾಜಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.