235 ಗೈರು ಮತದಾರರಿಂದ‌ ಮತದಾನ

ಕಲಬುರಗಿ:ಮೇ.1: ಸಾರ್ವತ್ರಿಕ‌ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ದಿನದಂದು‌ ವಿವಿಧ ಚುನಾವಣಾ ಕೆಲಸದಲ್ಲಿ ನಿರತವಾಗುವ ಅಗತ್ಯ ಸೇವೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಂದ (ಗೈರು ಮತದಾರರು) ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಪ್ರಕ್ರಿಯೆ ಬುಧವಾರ ಆರಂಭವಾಗಿದ್ದು, ಮೊದಲನೇ ದಿನ 235 ಜನ‌ ಸಿಬ್ಬಂದಿ ಮತ‌ ಚಲಾಯಿಸಿದ್ದಾರೆ ಎಂದು ಗುಲಬರ್ಗಾ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಮತದಾನ ದಿನದಂದು ಕರ್ತವ್ಯದ ಮೇಲಿರುವ ಅಗ್ನಿಶಾಮಕ, ರೈಲ್ವೆ, ದೂರದರ್ಶನ, ಆಕಾಶವಾಣಿ, ವಿದ್ಯುತ್, ಆರೋಗ್ಯ, ಬಿ.ಎಸ್.ಎನ್.ಎಲ್., ವಿಮಾನಯಾನ, ಕೆ.ಕೆ.ಆರ್.ಟಿ.ಸಿ., ಅಗ್ನಿಶಾಮಕ, ಸಂಚಾರಿ ಪೊಲೀಸ್, ಅಂಬುಲೆನ್ಸ್ ಸೇವೆ, ಕಾರಾಗೃಹ, ಪೊಲೀಸ್, ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿ-ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಚುನಾವಣಾ ಆಯೋಗ 12ಡಿ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕ ಅವಕಾಶ ಕಲ್ಪಿಸಿದೆ.

ಅದರಂತೆ ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ 1,648 ಜನ‌ ಸಿಬ್ಬಂದಿಯನ್ನು ಗೈರು ವರ್ಗದ ಮತದಾರರೆಂದು ಗುರುತಿಸಿದ್ದು, ಇವರೆಲ್ಲ ಮೇ 1 ರಿಂದ‌ 3ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ‌ ಎಂದು ಡಿ.ಸಿ. ಮಾಹಿತಿ ನೀಡಿದರು.