ಸಾರ್ವತ್ರಿಕ ಲಾಕ್ ಡೌನ್:ಉಚಿತ ಲಸಿಕೆ ನೀಡಲು ಒತ್ತಯ
ರಾಯಚೂರು.ಮೇ.೨೧.ಕೋವಿಡ್ ೧೯ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವತ್ರಿಕ ಮತ್ತು ಉಚಿತ ಲಸಿಕೆ ನೀಡಲು ಹಾಗೂ ಕಾರ್ಮಿಕರು,ರೈತರ ಕೃಷಿ ಕೂಲಿಕಾರರ ಬೇಡಿಕೆಗಳನ್ನು ಈಡೇರಿಸಲು ಸಿಐಟಿಯು,ಕೆಪಿ ಆರ್ ಎಸ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಂತರಾ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು ಕೋವಿಡ್ -೧೯ ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಮೇ ೧೦ ರವರೆಗೆ ಮೊದಲ ಹಂತದ ಲಾಕ್‌ಡೌನ್ ಮತ್ತು ಮೇ ೨೪ ರವರೆಗೆ ಎರಡನೇ ಹಂತಹ ಲಾಕ್ ಡೌನ್ ಘೋಷಿಸಿದೆ . ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೊಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣವು ಜನತೆಯಲ್ಲಿ ಆತಂಕವನ್ನು ಸೃಷ್ಟಿಸಿದೆ.ಆರೋಗ್ಯ ರಕ್ಷಣೆಗೆ ಬೇಕಾದ ಆಸ್ಪತ್ರೆ ಬೇಡಗಳು,ಔಷಧಿಗಳು,ಇಂಜೆಕ್ಷನ್‌ಗಳು,ಆಮ್ಲಜನಕ, ವೆಂಟಿಲೇಟರ್‌ಗಳು, ವ್ಯಾಕ್ಸಿನ್ಗಳು ಎಲ್ಲವೂ ಕೊರತೆಯಿಂದ ಕೂಡಿವೆ.
ವೈದ್ಯಕೀಯ ಸೌಲಭ್ಯಗಳ ಸಮಸ್ಯೆಗಳು ಒಂದು ಕಡೆಯಾದರೆ, ಲಾಕ್ ಡೌನ್ ನಿಂದಾಗಿ ಜನಜೀವನಗಳು ತೀರಾ ಅಸ್ತವ್ಯಸ್ತವಾಗಿವೆ , ರಾಜ್ಯದಲ್ಲಿ ಕೃಷಿ ಕೂಲಿಕಾರರೂ ಸೇರಿದಂತೆ ೩ ಕೋಟಿಗೂ ಹೆಚ್ಚಿನ ಅಸಂಘಟಿತ ಕಾರ್ಮಿಕರು ಸರಿಯಾದ ಕೆಲಸಗಳಿಲ್ಲದೆ ಮತ್ತು ಆದಾಯಗಳಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ . ಕಟ್ಟಡ ಕಾರ್ಮಿಕರು,ವಲಸೆ ಕಾರ್ಮಿಕರು,ಖಾಸಗಿ ವಾಹನ ಚಾಲಕರು,ಬೀದಿ ಬದಿ ವ್ಯಾಪಾರಿಗಳು , ಮನೆಗೆಲಸಗಾರರು ಸಿಬ್ಬಂದಿಗಳು ಮುಂತಾದವರು ಆದಾಯಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜನರ ಆದಾಯಗಳು ಕುಸಿದ ಮತ್ತು ಬೆಲೆಗಳ ಏರಿಳಿತದ ಪರಿಣಾಮವಾಗಿ ಕೃಷಿ ಮಾರುಕಟ್ಟೆ ಕುಸಿದಿದೆ. ಕೋವಿಡ್ -೧೯ ರ ಆತಂಕ ಹಾಗೂ ಲಾಕ್ ಡೌನ್ ಕಾರಣದಿಂದ ಹೂವು , ಹಣ್ಣು ಮತ್ತು ತರಕಾರಿ ಮುಂತಾದ ಪದಾರ್ಥಗಳಿಗೆ ಮಾರುಕಟ್ಟೆ ಸಂಕುಚಿತಗೊಂಡಿದೆ ಅದರಿಂದ ಕಾರ್ಮಿಕರು,ರೈತರ ಕೃಷಿ ಕೂಲಿಕಾರರಿಗೆ ಉಚಿತ ಲಸಿಕೆ ನೀಡಬೇಕು ಎಂದು ಒತ್ತಯಿಸಿದರು.
ಈ ಸಂದರ್ಭದಲ್ಲಿ ಕೆ.ಜಿ.ವೀರೇಶ್,ಎಚ್.ಪದ್ಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.