ಕೋವಿಡ್ ಸೋಂಕಿಗೆ ಒಳಗಾಗಿ ಇತ್ತೀಚೆಗೆ ಸಾವನ್ನಪ್ಪಿದ್ದ ಬ್ಯಾಡಗಿ ತಾಲೂಕಿನ ಧೂಳಿಕೊಪ್ಪ ಗ್ರಾಮದ ಪ್ರತಿಭಾನ್ವಿತ ಇಂಜಿನಿಯರ್ ಪ್ರವೀಣ್ ಹೊಸಳ್ಳಿ ಅವರ ಕುಟುಂಬ ವರ್ಗವನ್ನು ಭೇಟಿಯಾದ ಬಿಜೆಪಿ ಯುವ ಮುಖಂಡ ವಿಜಯಭರತ ಬಳ್ಳಾರಿ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ 10ಸಾವಿರ ರೂಗಳನ್ನು ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಎನ್.ಎಸ್.ಬಟ್ಟಲಕಟ್ಟಿ, ಹಾಲೇಶ ಜಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.