23.4 ಸಾವಿರ ಮೌಲ್ಯದ ಅಕ್ರಮಮದ್ಯ ವಶ :ಇಬ್ಬರ ಬಂಧನ

ಕಲಬುರಗಿ,ಏ 1: ಕಮಲಾಪುರ ಮತ್ತು ಮಹಾಗಾಂವ ಕ್ರಾಸ್ ನಲ್ಲಿ ದ್ವ್ವಿಚಕ್ರವಾಹನದ ಮೇಲೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಅಬಕಾರಿ ಪೊಲೀಸರು ಅವರಿಂದ 23,444 ರೂ ಮೌಲ್ಯದ ಮದ್ಯ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಶಾಂತಪ್ಪ ವೀರಭದ್ರಪ್ಪ ಮತ್ತು ಬಸವರಾಜ ಕಲ್ಯಾಣರಾವ ಬಂಧಿತ ಆರೋಪಿಗಳು.ಕಲಬುರ್ಗಿ ವಲಯ ಸಂಖ್ಯೆ1 ರ ಅಬಕಾರಿ ನಿರೀಕ್ಷಕ ಸಿದ್ದರಾಮಪ್ಪ ತಾಳಿಕೋಟಿ ಮತ್ತು ಉಪ ನಿರೀಕ್ಷಕ ಕೆ. ಪ್ರವೀಣ್ ಕುಮಾರ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾನ್ಸ್ಟೇಬಲ್‍ಗಳಾದ ಶಿವಪ್ಪ ಗೌಡ, ಮೋಹನ್, ಅರವಿಂದ್, ರಾಜೇಂದ್ರ ದಾಳಿ ತಂಡದಲ್ಲಿದ್ದರು.ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಅಬಕಾರಿ ದಾಳಿ ಮತ್ತಷ್ಟು ಚುರುಕುಗೊಂಡಿದೆ