ಕಲಬುರಗಿ,ಏ.16-ಇಲ್ಲಿನ ಸರ್ವಜ್ಞ ಕಾಲೇಜು 2023-24ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ “ಸರ್ವಜ್ಞ ಸ್ಕಾಲರ್‍ಶಿಪ್ ಅಡ್ಮಿಶನ್ ಟೆಸ್ಟ್” ಹಮ್ಮಿಕೊಂಡಿದ್ದು. ಏಪ್ರಿಲ್ 23 ಬೆಳಿಗ್ಗೆ 09.00 ಗಂಟೆಗೆ ಅಥವಾ 09.45 ಗಂಟೆಗೆ ಅಥವಾ ಏಪ್ರಿಲ್ 25 ಬೆಳಿಗ್ಗೆ 09.00 ಗಂಟೆಗೆ ಅಥವಾ 09.45 ಗಂಟೆಗೆ ಎಂ.ಸಿ.ಕ್ಯೂ (ಬಹು ಆಯ್ಕೆ ಪ್ರಶ್ನೆಗಳು) ಆಧಾರಿತ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಆದ್ಯತೆ ನೀಡಲಾಗುವುದು ಮತ್ತು ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡುವದರಿಂದ ಅತಿಹೆಚ್ಚು ಅಂಕಗಳಿಸುವ 60 ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ವಿನಾಯಿತಿ ನೀಡಲಾಗುವುದು ಹಾಗೂ ಆರ್ಥಿಕವಾಗಿ ಹಿಂದುಳಿದ ಕನ್ನಡ ಮಾಧ್ಯಮದ ಗ್ರಾಮೀಣ ಭಾಗದ ಅರ್ಹ ಮಕ್ಕಳಿಗೆ ಇನ್ನೂ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವದು ಎಂದು ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹದ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ, ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಪಾಟೀಲ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಈ ಸುವರ್ಣ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಲು ಮತ್ತು ಪರೀಕ್ಷೆಗೆ ನೊಂದಾಯಿಸಲು 9844488138 ಅಥವಾ 8050057184 ಅಥವಾ ಸರ್ವಜ್ಞ ಕಾಲೇಜು ಕಛೇರಿಗೆ ಭೇಟಿ ಕೊಡಬಹುದಾಗಿದೆ.