
ಕುಂದಗೋಳ ಮಾ. 4 : ಪ.ಪಂ. ಸಭಾಭವನದಲ್ಲಿ 2023-24 ನೇ ಸಾಲಿನ 3 ಕೋಟಿ 73 ಲಕ್ಷ 90 ಸಾವಿರ ರೂ. ಗಳ ಆಯ-ವ್ಯಯ ಬಜೆಟ್‍ನ್ನು ಪ ಪಂ ಅಧ್ಯಕ್ಷ ಗಣೇಶ ಕೋಕಾಟೆಯವರು ಮಂಡಿಸಿದರು.
ಕೊಕಾಟೆ ಅವರು ಮಾತನಾಡಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಹಿತ ದೃಷ್ಟಿಯಿಂದ ಈ ಬಜೆಟ್ ಮಂಡಿಸಲಾಗುತ್ತಿದ್ದು, ಮುಕ್ತ ನಿಧಿಗೆ 28 ಲಕ್ಷ, 15 ನೇ ಹಣಕಾಸಿಗಾಗಿ 81 ಲಕ್ಷ, ವೇತನಕ್ಕಾಗಿ 103 ಲಕ್ಷ, ಬೀದಿದೀಪ ನಿರ್ವಹಣೆಗೆ 25 ಲಕ್ಷ, ಪ ಜಾ/ ಪ ಪಂ ಪಂಗಡ ಕಲ್ಯಾಣಕ್ಕೆ 09 ಲಕ್ಷ, ಡೇ ನಲ್ಮ ಯೋಜನೆಗೆ 05 ಲಕ್ಷ, ಇತರೆ ಕೇಂದ್ರ ಸರಕಾರದ ಅನುದಾನ 05 ಲಕ್ಷ, ಹಾಗೂ ಇತರೆ ಮೂಲಗಳಿಂದ 117. ಲಕ್ಷ ಸೇರಿದಂತೆ ಒಟ್ಟು 03 ಕೋಟಿ,73 ಲಕ್ಷ, 90 ಸಾವಿರ ರೂ ಗಳ ಬಜೆಟ್ ಮಂಡಿಸುತ್ತಾ ಎಸ್ ಸಿ/ ಎಸ್ ಟಿ ಸಮಾಜದ, ಹಿಂದುಳಿದ ವರ್ಗದ ದುರ್ಬಲರ ಹಾಗೂ ವಿಶೇಷ ಚೇತನರ ಸ್ವಾವಲಂಬನೆ ಸೇರಿದಂತೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ನಾವು ಸದಾ ಸಿದ್ದರಿದ್ದೇವೆ ಎಂದು ಹೇಳಿದರು.
ನಂತರ ಪ ಪಂ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ಅವರು ಮಾತನಾಡಿ ಪಟ್ಟಣದಲ್ಲಿ ಸಿ ಸಿ.ಟಿವಿ ಕ್ಯಾಮರಾಗಳನ್ನು ಅಳವಡಿಕೆ. ಮತ್ತು ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಿಸಿ, ಕಸ ಮುಕ್ತ ನಗರವನ್ನಾಗಿ ಮಾಡಲು ಮುಂದಾಗೋಣ ಎಂದರು. ನಂತರ ಮನೆ- ನಳ- ಕಸ ವಿಲೇವಾರಿ, ಗಟಾರ ಸ್ವಚ್ಛತೆ ಕುರಿತಂತೆ ಸಭೆಯಲ್ಲಿ ಚರ್ಚೆಗಳು ನಡೆದವು.
ಈ ಸಂದರ್ಭದಲ್ಲಿ ಪ ಪಂ ಉಪಾಧ್ಯಕ್ಷ ಹನುಮಂತಪ್ಪ ರಣತೂರ, ಸ್ಥಾಯಿ ಸಮೀತಿ ಅಧ್ಯಕ್ಷ ದಿಲೀಪ ಕಲಾಲ, ಪ ಪಂ ಮುಖ್ಯ ಅಧಿಕಾರಿ ಎನ್ ಕೆ ಡೊಂಬರ, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.