23 ರಂದು ಹಿರೇಸಾವಳಗಿ ರಥೋತ್ಸವ

ಕಲಬುರಗಿ: ಏ.21: ಹಿರೇ ಸಾವಳಗಿ(ಬಿ) ಗ್ರಾಮದಲ್ಲಿ ಜಗದ್ಗುರು ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏ.23 ರಂದು ರಾತ್ರಿ 8 ಗಂಟೆಗೆ ರಥೋತ್ಸವ ನಡೆಯಲಿದೆ.
22 ರಂದು ಉಚ್ಚಾಯಿ ಉತ್ಸವ,24 ರಂದು ಮದ್ದು ಸುಡುವದು,25 ರಂದು ಮಧ್ಯಾಹ್ನ 11 ಗಂಟೆಗೆ ಬಿದಾಯಿ ಹಾಗೂ ಮನರಂಜನೆಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ.ಏ 18 ರಿಂದ ಆರಂಭವಾದ ಪಲ್ಲಕ್ಕಿ ಉತ್ಸವ, ಕಲ್ಯಾಣ ಕಟ್ಟೆಯ ದರ್ಶನ ಕಾರ್ಯಕ್ರಮ ಏ.22 ರವರೆಗೆ ಪ್ರತಿದಿನ ರಾತ್ರಿ ನಡೆಯಲಿದೆ.ಗುರುನಾಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಗದ್ಗುರು ಶಿವಲಿಂಗೇಶ್ವರ ಭಕ್ತಾದಿಗಳು ತಿಳಿಸಿದ್ದಾರೆ.