23 ರಂದು ಹನುಮ ಜಯಂತಿ ಆಚರಣೆ

ತಾಳಿಕೋಟೆ:ಮೇ.14: ಪಟ್ಟಣದ ಬಜಾರ ಹನುಮಾನ ದೇವಸ್ಥಾನದಲ್ಲಿ ಪ್ರತಿವರ್ಷ ಆಚರಿಸಲಾಗುತ್ತಿದ್ದ ಹನುಮಾನ ಜಯಂತ್ಯೋತ್ಸವವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು ಸದರಿ ಜಯಂತ್ಯೋತ್ಸವವನ್ನು ಇದೇ ದಿ.23 ಗುರುವಾರರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನ ಕಮಿಟಿ ತಿಳಿಸಿದೆ.
ಅಂದು ಬೆಳಿಗ್ಗೆ 6 ಗಂಟೆಗೆ ತೊಟ್ಟಿಲು ಕಾರ್ಯಕ್ರಮ, 7 ಗಂಟೆಗೆ ಗಂಗಸ್ಥಳ, ಫಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಜರುಗಲಿವೆ.
ನಂತರ ಮದ್ಯಾಹ್ನ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ಜರುಗಲಿದ್ದು ಕಾರಣ ಭಕ್ತಾಧಿಗಳು ಶ್ರೀ ಹನುಮಾನ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಹನುಮಾನ ಕೃಪೆಗೆ ಪಾತ್ರರಾಗಬೇಕೆಂದು ಕಮಿಟಿ ತಿಳಿಸಿದೆ.