23 ರಂದು ಪುಸ್ತಕ ಬಿಡುಗಡೆ – ಗಾನ ಸಂಭ್ರಮ

ಕಲಬುರಗಿ,ಜು.20: ರಾಷ್ಟ್ರಕೂಟ ಪುಸ್ತಕ ಮನೆ ಸೇಡಂ ಮತ್ತು ಕಲಬುರಗಿಯ ಸುಕಿ ಸಾಂಸ್ಕøತಿಕ ಸಂಸ್ಥೆಯ ಸಹಯೋಗದಲ್ಲಿ ನಗರದ ಕಲಾಮಂಡಳದಲ್ಲಿ ಜು.23 ರಂದು ಸಂಜೆ 5 ಕ್ಕೆ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.
ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ಬರೆದ ಮುಗಿಲು ಸುರಿದ ಮುತ್ತು’ ವಿಮರ್ಶಾ ಸಂಕಲನವನ್ನು ಚಲನಚಿತ್ರ ಕ್ಷೇತ್ರದ ಹಿರಿಯ ಸಂಗೀತ ನಿರ್ದೇಶಕರು, ಬರಹಗಾರರು ಆಗಿರುವ ವಿ.ಮನೋಹರ ಬಿಡುಗಡೆ ಮಾಡಲಿದ್ದಾರೆ. ಕಲಬುರಗಿಯ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ವೀರಶೆಟ್ಟಿ ಗಾರಂಪಳ್ಳಿ ಅವರು ಪುಸ್ತಕ ಕುರಿತು ಮಾತನಾಡುವರು. ಸಿದ್ದಲಿಂಗೇಶ್ವರ ಪ್ರಕಾಶನದ ಬಸವರಾಜ ಕೋನೆಕ್ ಅವರು ಅಧ್ಯಕ್ಷತೆ ವಹಿಸುವರು. ಲೇಖಕ ಮಹಿಪಾಲರೆಡ್ಡಿ ಉಪಸ್ಥಿತರಿರುವರು. ಸಂಜೆ ಗಾನ ಸಂಭ್ರಮ : ಇದೇ ಸಂದರ್ಭದಲ್ಲಿಮುಸ್ಸಂಜೆಯ ಮನೋಹರ ಗಾನ ಸಂಭ್ರಮ’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಗೀತ ನಿರ್ದೇಶಕರಾದ ವಿ.ಮನೋಹರ ಅವರ ಸಮ್ಮುಖದಲ್ಲಿ, ಅವರೇ ಬರೆದ ಸಿನಿಮಾ ಗೀತೆಗಳ, ಸಂಗೀತ ಸಂಯೋಜಿಸಿದ ಹಾಡುಗಳ ಮತ್ತು ಮನೋಹರ ಅವರ ಜನಪ್ರಿಯ ಸಿನಿಗೀತೆಗಳನ್ನು ಹಾಡುವ ಕಾರ್ಯಕ್ರಮವೂ ನಡೆಯಲಿದೆ. ಸಿನಿಮಾ ನಿರ್ದೇಶಕರಾದ ಮಂಜು ಪಾಂಡವಪುರ ಅಧ್ಯಕ್ಷತೆ ವಹಿಸುವರು. ಸುಕಿ ಮೆಲೋಡಿಸ್‍ನ ಮುಖ್ಯಸ್ಥರಾದ ಕಿರಣ್ ಪಾಟೀಲರ ನೇತೃತ್ವದಲ್ಲಿ ಸುಮಾರು 11 ಕ್ಕೂ ಹೆಚ್ಚು ಗಾಯಕರು `ಮುಸ್ಸಂಜೆಯ ಮನೋಹರ ಗಾನ ಸಂಭ್ರಮ’ದಲ್ಲಿ ಭಾಗವಹಿಸುವರು.