23 ನೇ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.26: ನಗರದ ತಾಳೂರು ರಸ್ತೆಯ 23ನೇ ವಾರ್ಡಿನ ಬೀಚಿ ನಗರ. ಭಗತ್ ಸಿಂಗ್ ನಗರ.
ಮಹಾನಂದಿ ಕೊಟ್ಟಂ ಪ್ರದೇಶದಲ್ಲಿ ಖನಿಜ ನಿಧಿಯ ಎರಡು ಕೋಟಿ ರೂ ಅನುದಾನದಲ್ಲಿ ಒಳಚರಂಡಿ ಹಾಗೂ  ಸಿ.ಸಿ ರಸ್ತೆ ಕಾಮಗಾರಿ ಸೇರಿದಂತೆ  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರ ಶಾಸಕ‌ ಗಾಲಿ ಸೋಮಶೇಖರ ರೆಡ್ಡಿ ಅವರು ಮಹಾನಂದಿ ಕೊಟ್ಟಂ ಎಂಟ್ರನ್ಸ್ ನ ಬನ್ನಿ ಗಿಡ ಹತ್ತಿರ
ಇಂದು ಚಾಲನೆ ನೀಡಿದರು.
ಪಾಲಿಕೆಯ ಸದಸ್ಯರು, ಸಭಾಧ್ಯಕ್ಷರೂ ಆಗಿರುವ ಪಿ.ಗಾದೆಪ್ಪ, ಉಪ ಮೇಯರ್,  ಸ್ಥಾಯಿ ಸಮಿತಿ ಸದಸ್ಯ ಮೋತ್ಕರ್   ಶ್ರೀನಿವಾಸ್  ಹಾಗೂ ಸ್ಥಳೀಯ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.