23 ಕೆಜಿ ಗಾಂಜಾ ವಶ, ಇಬ್ಬರ ಬಂಧನ

ಕಲಬುರಗಿ,ಜು.28-ಅಕ್ರಮ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಓರ್ವ ವಿದ್ಯಾರ್ಥಿ ಸೇರಿ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿ 2.30 ಲಕ್ಷ ರೂ.ಮೌಲ್ಯದ 23 ಕೆಜಿ ಗಾಂಜಾ, 20 ಸಾವಿರ ರೂ.ಮೌಲ್ಯದ 2 ಮೊಬೈಲ್ ಮತ್ತು 1.50 ಲಕ್ಷ ರೂ.ಮೌಲ್ಯದ ಒಂದು ಬೈಕ್ ಜಪ್ತಿ ಮಾಡಿದ್ದಾರೆ.
ಮಹಾರಾಷ್ಟ್ರ ಮೂಲದ ಭೀಮಾ ಹೊನ್ನಳ್ಳಿ (30) ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಬಾಣತಿಹಾಳ ಗ್ರಾಮದ ವಿದ್ಯಾರ್ಥಿ ಧರ್ಮರಾಜ ಬೇವಿನಕಟ್ಟಿ (23) ಬಂಧಿತರು. ಲಕ್ಷ್ಮಣ ಸೀತಾಳಗೇರೆ(36) ಎಂಬಾತ ಪರಾರಿಯಾಗಿದ್ದಾನೆ.
ನಗರದ ಎಂ.ಎಸ್.ಕೆ.ಮಿಲ್ ಗ್ರೌಂಡ್ ಖುಲ್ಲಾ ಮೈದಾನದಲ್ಲಿ ಮೂವರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೆÇಲೀಸರು ದಾಳಿ ಮಾಡಿದ್ದರು.
ನಗರ ಪೊಲೀಸ್ ಆಯುಕ್ತ ವೈ.ಎಸ್.ರವಿಕುಮಾರ, ಉಪ ಪೊಲೀಸ್ ಆಯುಕ್ತ ಅಡ್ಡೂರು ಶ್ರೀನಿವಾಸಲು ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪಿಐ ವಾಜೀದ್ ಪಟೇಲ್, ತಹಶೀಲ್ದಾರ ವೆಂಕಣ್ಣಗೌಡ ಬಿ.ಪಾಟೀಲ, ಕಂದಾಯ ನಿರೀಕ್ಷಕ ಗುರುಪ್ರಸಾಧ ಮಳ್ಳಿ, ಸಂತೋಷ ಯಡ್ರಾಮಿ, ಶಶಿಧರ ದೇವದುರ್ಗ, ಪೊಲೀಸ್ ಸಿಬ್ಬಂದಿಗಳಾದ ರವೀಂದ್ರಕುಮಾರ, ವೇದರತ್ನಂ, ಮಲ್ಲಿಕಾರ್ಜುನ, ಶರಣಬಸಪ್ಪ, ಕೇಸುರಾಯ, ಸುನೀಲಕುಮಾರ, ಯಲ್ಲಪ್ಪ, ಶಿವಕುಮಾರ, ಅಶೋಕ ಕಟಕೆ, ಅಶೋಕ, ರಾಜಕುಮಾರ, ವಿಶ್ವನಾಥ, ನಾಗರಾಜ ಅವರು ದಾಳಿ ನಡೆಸಿದ್ದರು.