23ರಂದು ಪಂಜಾಬದಲ್ಲಿ ಅಮರ ಬಲಿದಾನ ದಿವಸ ಹವಾ ಮಲ್ಲಿನಾಥ್ ಮಹಾರಾಜ್ ನೇತೃತ್ವದಲ್ಲಿ ಹುತಾತ್ಮ ಯೋಧರ ಸ್ಮರಣೆ 14ರಿಂದ ಭಾರತ ಮಾತಾ ಮಂದಿರದಿಂದ ದೇಶ ಭಕ್ತರ ಯಾತ್ರೆ

ಕಲಬುರಗಿ:ಮಾ.11: ದೇಶದ ಜನರಲ್ಲಿ ದೇಶಭಕ್ತಿ ಮೂಡಿಸುವ, ಆದರಲ್ಲೂ ಒಗ್ಗಟ್ಟು ಬಲಪಡಿಸುವ ಏಕೈಕ ಉದ್ದೇಶ ಹೊಂದಿರುವ ಪರಮ ಪೂಜ್ಯ ಹವಾ ಮಲ್ಲಿನಾಥ್ ಮಹಾರಾಜ್ ನಿರಗುಡಿ ಅವರ ಸ್ಥಾಪಿತ ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿ ಒಂದಿಲ್ಲ ಒಂದು ದೇಶ ಭಕ್ತಿ ಬಲಪಡಿಸುವ ಕಾರ್ಯಕ್ರಮಗಳು ಪೂಜ್ಯರ ನೇತೃತ್ವದಲ್ಲಿ ನಿರಂತರವಾಗಿ ನಡೆದು ಬರುತ್ತಲೇ ಇವೆ. ಇದಕ್ಕೆ ಮೇಲ್ಪಂಕ್ತಿ ಎನ್ನುವಂತೆ ಪೂಜ್ಯರ ನೇತೃತ್ವದಲ್ಲಿ ಇದೇ ಮಾರ್ಚ 23ರಂದು ಬೆಳಿಗ್ಗೆ 9ಕ್ಕೆ ಪಂಜಾಬ್ ರಾಜ್ಯದ ಖಟ್ಕರ್ ಕಲಾ ಮೈದಾನದಲ್ಲಿ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಶೃದ್ಧಾಂಜಲಿ ಸಲ್ಲಿಸುವ ಹಾಗೂ ತದನಂತರ ಬೆಳಿಗ್ಗೆ 10ಕ್ಕೆ ಶಹೀದ್ ಇ ಅಝಾಮ ಭಗತ್‍ಸಿಂಗ್ ಮ್ಯೂಜಿಯಂ ಹತ್ತಿರ ಇರುವ ರಾಜ್ ಫ್ಯಾಲೆಸ್ ನವಾಂಶರ್ ಬಂಗ್ ರಸ್ತೆ, ಕಹಂ (ಎಸ್‍ಬಿಎಸ್ ನಗರ) ಪಂಜಾಬ್‍ದಲ್ಲಿ ಹಮ್ಮಿಕೊಳ್ಳಲಾಗಿದೆ.

ದೇಶಭಕ್ತಿ ಗಟ್ಟಿಗೊಳಿಸುವ ಹಾಗೂ ವ್ಯಾಪಕಗೊಳಿಸುವ ನಿಟ್ಟಿನಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿ ನಿರಂತರವಾಗಿ ದೇಶ ಭಕ್ತಿ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿದ್ದು, ಈಗ ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್, ಸುಖದೇವ, ರಾಜಗುರು, ಸುಭಾಷಚಂದ್ರ ಭೋಸ್, ಚಂದ್ರಶೇಖರ ಆಜಾದ, ಅಷ್ಪಾಖುಲ್ಲಾ ಖಾನ್, ರಾಮಪ್ರಸಾದ್ ಬಿಸ್ಮಿಲ್ಲಾ, ವೀರ ಸಾವರ್ಕರ್, ಉದ್ದಮಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವಾಸುದೇವ ಬಲವಂತರಾವ್ ಫಡ್ಕೆ ಸೇರಿದಂತೆ ಮುಂತಾದವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಅಮೂಲ್ಯವಾದ ಜೀವನವನ್ನೇ ತ್ಯಾಗ ಮಾಡಿರುವುದು ನಾವೆಲ್ಲರೂ ಮರೆಯದೇ ಸ್ಮರಿಸುವುದು ಅಗತ್ಯವಾಗಿರುವುದನ್ನು ಮನಗಂಡು ಪೂಜ್ಯರು ಪ್ರತಿವರ್ಷ ಮಾರ್ಚ 23ರಂದು ಐತಿಹಾಸಿಕ ಅಮರ ಬಲಿದಾನ ದಿನಾಚರಣೆ ದೇಶದ ನಾನಾ ಭಾಗಗಳಲ್ಲಿ ಆಯೋಜಿಸುತ್ತಾ ಬರುತ್ತಿದ್ದು, ಈ ಸಲ ಪಂಜಾಬ್‍ನಲ್ಲಿರುವ ಶಹೀದ್ ಭಗತಸಿಂಗ್ ಅವರ ಸ್ಮರಣಾರ್ಥ ನಿರ್ಮಿಸಲಾದ ಮ್ಯೂಜಿಯಂ ಸಮೀಪದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳವು ಭಗತಸಿಂಗ್ ಅವರ ಪೂರ್ವಿಕರ ಮೂಲ ವಾಸಸ್ಥಳವಾಗಿದೆ.

ಈ ಹಿಂದೆ ಮಾರ್ಚ 23ರ 2021ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಾಗೂ ಮಾರ್ಚ್ 23ರ 2022ರಲ್ಲಿ ನವದೆಹಲಿಯ ತಾಲಕೋಟರ್ ಮೈದಾನದಲ್ಲಿ ಅಮರ ಬಲಿದಾನ ದಿನಾಚರಣೆ ಸಮಿತಿ ವತಿಯಿಂದ ದೇಶ ಬಾಂಧವರೊಂದಿಗೆ ಆಯೋಜಿಸಿ ಅಮರ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರಾದ ಶಹೀದ್ ಭಗತಸಿಂಗ್, ಸುಖದೇವ, ರಾಜಗುರು ಹಾಗೂ ಸಮಸ್ತ ಸ್ವಾತಂತ್ರ್ಯ ಹೋರಾಟಗಾರರಿಗೆ ಶೃದ್ಧಾಂಜಲಿ ಅರ್ಪಿಸಿ ಅವರ ತ್ಯಾಗ, ಬಲಿದಾನ ಸಮಸ್ತದೇಶದ ಜನತೆಗೆ ಮುಟ್ಟಿಸುವ ಕಾರ್ಯ ನಡೆಯಿತು. ಈಗ ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂಗವಾಗಿ ಅಮರ ಬಲಿದಾನ ದಿವಸವನ್ನು ಭಾರತ- ಪಾಕಿಸ್ತಾನ ಗಡಿಯಲ್ಲಿರುವ ಪಂಜಾಬನಲ್ಲಿ ಹಮ್ಮಿಕೊಳ್ಳಲಾಗಿದೆ. ಜೈ ಭಾರತ ಸೇವಾ ಸಮಿತಿ ನವದೆಹಲಿ ವತಿಯಿಂದ ಆಯೋಜಿಸಲಾಗಿರುವ ಈ ಹುತಾತ್ಮ ಯೋಧರ ಸ್ಮರಣಾ ದಿವಸಕ್ಕೆ ದೇಶದದ್ಯಂತ ಸಹಸ್ರಾರು ದೇಶಭಕ್ತ ಪ್ರೇಮಿಗಳು ಪಾಲ್ಗೊಳ್ಳುತ್ತಿದ್ದು, ಕಲ್ಯಾಣ ಕರ್ನಾಟಕದಿಂದ ಸಹಸ್ರಾರು ದೇಶ ಬಾಂಧವರು ಪಾಲ್ಗೊಳ್ಳುತ್ತಿದ್ದಾರೆ.
ದೇಶ ಭಕ್ತರ ಯಾತ್ರೆ: ಅಮರ ಬಲಿದಾನ ದಿವಸದಂಗವಾಗಿ ಇದೇ ಮಾಚ್9 14ರಿಂದ ಆಳಂದ ತಾಲೂಕಿನ ಲಾಡಚಿಂಚೋಳಿ ಬಳಿಯ ರಾಜ್ಯ ಹೆದ್ದಾರಿ ಪಕ್ಕದ ಜೈ ಭಾರತ ಮಾತಾ ಮಂದಿರದಿಂದ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ನೇತೃತ್ವದಲ್ಲಿ ಐತಿಹಾಸಿಕ ದೇಶ ಭಕ್ತರ ಯಾತ್ರೆ ಕೈಗೊಳ್ಳಲಾಗಿದೆ. ಹಿಂದಿನ ವರ್ಷಗಳಲ್ಲೂ ಸಹ ಭಾರತ ಮಾತಾ ಮಂದಿರದಿಂದ ಯಾತ್ರೆ ದೇಶ ಭಕ್ತಿಯಾತ್ರೆ ಹೊರಡಿತ್ತು.
ದೇಶಭಕ್ತರು ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಗ್ರಾಮ-ಗ್ರಾಮಗಳಲ್ಲಿ ಪರಮ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಹಗಲಿರಳು ಜನ ಜಾಗೃತಿ ಮೂಡಿಸಲಾಗುತ್ತಿದೆ. ಒಟ್ಟಾರೆ
ಸ್ವಾತಂತ್ರ್ಯ ಯೋಧರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲೂ ಸಹಸ್ರಾರು ದೇಶಭಕ್ತರು ಪಾಲ್ಗೊಳ್ಳುವ ಮೂಲಕ ರಾಷ್ಟ್ರ ಭಕ್ತಿ ಮೆರೆಯುತ್ತಿರುವುದು ಅವಿಸ್ಮರಣೀಯ ಎಂದೇ ಹೇಳಬಹುದು.

ಸ್ವಾತಂತ್ರ್ಯ ಯೋಧ ಕುಟುಂಬದವರಿಗೆ ಸತ್ಕಾರ: ಪಂಜಾಬ್‍ದಲ್ಲಿ ಮಾರ್ಚ್ 23ರಂದು ನಡೆಯುವ ಅಮರ ಬಲಿದಾನ ದಿವಸದಲ್ಲಿ ಸ್ವಾತಂತ್ರ್ಯ ಯೋಧ ಹುತಾತ್ಮರಾದ ಚಂದ್ರಶೇಖರ ಆಜಾದ್ ಕುಟುಂಬದ ಸದಸ್ಯ ಅಮಿತ ಅಝಾದ್ ತಿವಾರಿ, ಶಹೀದ್‍ಭಗತಸಿಂಗ್ ಸಿಂಗ್ ಪರಿವಾರದ ಕುಡಿ ಯದವಿಂದರ್‍ಸಿಂಗ್ ಸಂಧು, ಶಹೀದ್ ರಾಜಗುರು ಕುಟುಂಬದ ಸದಸ್ಯ ಸತ್ಯಶೀಲ್ ರಾಜಗುರು, ಶಹೀದ್ ಆಷ್ಫಖುಲ್ಲಾ ಖಾನ್ ಕುಟುಂಬದ ಸದಸ್ಯರಾದ ಆಲಾಖ್ ಉಲ್ಲಾ ಖಾನ್, ಶಹೀದ್ ಉದ್ದಮ ಸಿಂಗ್ ಪರಿವಾರದ ಹರ್ಪಲ್ ಸಿಂಗ್ ಸುನಮ್, ಶಹೀದ್ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕುಟುಂಬದ ಸದಸ್ಯರಾದ ಸುನೀಲ್ ಗೋಪಾಲರಾವ್, ಸುಖದೇವ್ ಕುಟುಂಬದ ಆಶೋಕ್ ಥಾಪರ್, ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದ ಸದಸ್ಯರಾದ ಸೋಮಶೇಖರ ದೇಸಾಯಿ, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಕುಟುಂಬದ ಸದಸ್ಯರಾದ ಕರವೀರಪ್ಪ ಡಿ.
ರೋಗನ್ನವರ್ ಅವರನ್ನು ತುಂಬಿದ ಬಟ್ಟೆ ಆಯೇರಿಯೊಂದಿಗೆ ಗೌರವಿಸಲಾಗುತ್ತಿದೆ.

ದೇಶಭಕ್ತಿ ಪ್ರವಚನ: ಈಚೆಗೆ ಕಳೆದ ಜನೇವರಿ 26ರ ಗಣರಾಜ್ಯೋತ್ಸವ ಅಂಗವಾಗಿ ತಿಂಗಳ ಪಯರ್ಂತ ಲಾಡಚಿಂಚೋಳಿ ಬಳಿಯ ಭಾರತ ಮಾತಾ ಮಂದಿರದಲ್ಲಿ ದೇಶ ಭಕ್ತಿ ಕುರಿತಾಗಿ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಎಲ್ಲೇಡೆ ಶರಣರ ಹಾಗೂ ಮಹಾಪುರುಷರ ಕುರಿತಾಗಿ ಪ್ರವಚನ ಹಮ್ಮಿಕೊಳ್ಳುತ್ತಿದ್ದರೆ ಹವಾ ಮಲ್ಲಿನಾಥ ಮಹಾರಾಜ ದೇಶಭಕ್ತಿ ಪ್ರವಚನ ಹಮ್ಮಿಕೊಳ್ಳುವುದರ ಜತೆಗೆ ಭಾರತ ಮಾತಾ ಮಂದಿರದಲ್ಲಿ ಡಾ. ಆಂಬೇಡ್ಕರ, ಭಗತಸಿಂಗ್ ಹಾಗೂ ಸಂಗೊಳ್ಳಿ ರಾಯಣ್ಣರವರ ಪುತ್ಥಳಿ ಅನಾವರಣಗೊಳಿಸಲು ಮುಂದಾಗಿರುವುದು ಐತಿಹಾಸಿಕ ಕಾರ್ಯವಾಗಿದೆ. ಹೀಗೆ ಹತ್ತು ಹಲವಾರು ದೇಶಭಕ್ತಿ ಕಾರ್ಯಕ್ರಮಗಳನ್ನು ಪೂಜ್ಯ ಹವಾ ಮಲ್ಲಿನಾಥ ಮಹಾಜರ್‍ರು ನೆರವೇರಿಸುತ್ತಾ ಬರುತ್ತಿದ್ದಾರೆ.
.
……………….

ನಾವು ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ, ಆದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರು ರಚಿಸಿದ ನಮ್ಮ ದೇಶದ ಸಂವಿಧಾನದಲ್ಲಿ ಸಮಸ್ತ ಭಾರತೀಯರಿಗೆ ನೀಡಿರುವ ಜವಾಬ್ದಾರಿಯುತ ಮೂಲಭೂತ ಕರ್ತವ್ಯಗಳ ಕಡೆ ನಾವು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ, ಸಂವಿಧಾನ ಗೌರವಿಸುವ ಹಾಗೂ ಪಾಲಿಸುವ ನಿಟ್ಟಿನಲ್ಲಿ ಇಂದು ಪ್ರತಿಯೊಬ್ಬರಲ್ಲಿ ರಾಷ್ಟಭಕ್ತಿ ಹೆಚ್ಚಿಸುವುದು ಅಗತ್ಯವಾಗಿದೆ. ದೇಶದ ಸ್ವಾತಂತ್ರ್ಯ ಸಲುವಾಗಿ ತಮ್ಮ ಜೀವನ ತ್ಯಾಗ ಮಾಡಿದ ಸ್ವಾತಂತ್ರ್ಯ ವೀರರನ್ನು ಯಾವುದೇ ನಿರ್ದಿಷ್ಟ ಜಾತಿ, ಧರ್ಮಕ್ಕೆ ಹೋಲಿಸದೇ ಅವರೆಲ್ಲರನ್ನೂ ಭಾರತಿಯರೆಂದು ಗೌರವಿಸಿ, ಅವರ ಜಯಂತಿ ಹಾಗೂ ಪುಣ್ಯಸ್ಮರಣೆ ಸಮಸ್ತ ಭಾರತೀಯರೆಲ್ಲರೂ ಮಾಡುವುದರೊಂದಿಗೆ ಆ ಮಹಾನ್ ನಾಯಕರು ದೇಶಕ್ಕಾಗಿ ನೀಡಿರುವ ಅಮೂಲ್ಯವಾದ ಅವರ ತ್ಯಾಗ, ಬಲಿದಾನ ಯುವ ಪೀಳಿಗೆಗೆ ತಿಳಿ ಹೇಳುವ ಕೆಲಸ ಮಾಡಬೇಕಿದೆ.
– ಪರಮಪೂಜ್ಯ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ, ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು, ಜೈ ಭಾರತ ಮಾತಾ ಸೇವಾ ಸಮಿತಿ, ನವದೆಹಲಿ

ಪಂಜಾಬದಲ್ಲಿ ನಡೆಯುವ ಅಮರ ಬಲಿದಾನ ದಿನಾಚರಣೆ ಪರಮ ಪೂಜ್ಯರಾದ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ದೇಶಕ್ಕೆ ಕೊಡುತ್ತಿರುವ ದೊಡ್ಡ ಕೊಡುಗೆಯಾಗಿದೆ. ಪೂಜ್ಯರು ವಾಣಿಯಂತೆ ನಾವು ಭಲಿಷ್ಠ ಬಾರತ ನಿರ್ಮಾಣ ಮಾಡಬೇಕಿದೆ. ಯುವಕರಲ್ಲಿ ದೇಶಭಕ್ತಿ ಹೆಚ್ಚಳವಾಗಬೇಕಿದೆ. ಈಗಾಗಲೇ ಈ ಕಾರ್ಯಕ್ರಮದ ಯಶಸ್ವಿಗಾಗಿ ಸಮಿತಿ ವತಿಯಿಂದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
– ವೈಜನಾಥ ಝಳಕಿ, ನ್ಯಾಯವಾದಿಗಳು ಹಾಗೂ ರಾಷ್ಟ್ರೀಯ ವಕ್ತಾರರು, ಜೈ ಭಾರತ ಮಾತಾ ಸೇವಾ ಸಮಿತಿ, ನವದೆಹಲಿ