23ನೇ ವಾರ್ಡಿನ ಜನರಿಗೆ ಕೋವಿಡ್ ಲಸಿಕೆ ಜೊತೆಗೆ ಸಸಿ ವಿತರಿಸಿದ ಗಾದೆಪ್ಪ

ಬಳ್ಳಾರಿ ಜೂ 10 : ನಗರದ 23ನೇ ವಾರ್ಡಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇಂದು 44 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲಾಯಿತು. ಇಲ್ಲಷ್ಟೇ ಅಲ್ಲದೆ ಎಂ ವಿ ನಗರದ 1 ನೇ ಕ್ರಾಸ್‍ನಲ್ಲಿರುವ ಕಪ್ಪಗಲ್ ರೋಡ್‍ನ ಮದ್ದನೇಶ್ವರ ದೇವಸ್ಥಾನದ ಆವರಣದಲ್ಲಿ ಸಹ ಜನರಿಗೆ ಲಸಿಕೆ ನೀಡಲಾಯಿತು.
ಈ ವಾರ್ಡಿನ ಪಾಲಿಕೆಯ ಸದಸ್ಯ ಪಿ.ಗಾದೆಪ್ಪ ಇದನ್ನು ಆಯೋಜಿಸಿದ್ದರು. ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, 24 ನೆ ವಾರ್ಡ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಮುಂ‌ಡ್ಲೂರು ಅನೂಪ್ ಕುಮಾರ್, ಪಾಲಿಕೆ ಆಯುಕ್ತೆ ಪ್ರೀತಿ, ಎಸಿ ರಮೇಶ್ ಕೊನರೆಡ್ಡಿ ಅವರು ಆಗಮಿಸಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಪರಿಶೀಲನೆ ಮಾಡಿದರಲ್ಲದೆ. ಲಸಿಕೆ ಪಡೆದವರಿಗೆ
ವಿವೇಕನಂದ ಯುವಕ ಸಂಘದಿಂದ ನೀಡಿದ ಸಸಿಗಳನ್ನು ವಿತರಿಸಿ, ಅವನ್ನು ಬೆಳೆಸುವಂತೆ ಜನರಿಗೆ ಮನವಿ ಮಾಡಿದರು.
ಸಂಜೆ 5 ಗಂಟೆ ವರೆಗೆ ಇದನ್ನು ಆಯೋಜಿಸಿದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಖು ಮತ್ತು ಮಹಾಮಾರಿ ಕರೋನಾ ಸೋಂಕಿನಿಂದ ರಕ್ಷಣೆ ಪಡೆಯಬೇಕು ಎಂದು ಗಾದೆಪ್ಪ ಈ ಸಂದರ್ಭದಲ್ಲಿ ಲಸಿಕೆ ಪಡೆದವರಿಗೆ ತಿಳಿಸಿದರು.