227 ಮೆ. ಟ ಆಮ್ಲಜನಕ ನಗರಕ್ಕೆ ಪೂರೈಕೆ

ಬೆಂಗಳೂರು,ಜೂ.೫- ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಮ್ಲಜನಕ ಕೊರತೆ ದೂರಮಾಡುವ ಸಲುವಾಗಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಆಮ್ಲಜನಕ ರಾಜ್ಯಕ್ಕೆ ಪೂರೈಕೆ ಮಾಡಲಾಗುತ್ತಿದೆ
ಇಂದು ಗುಜರಾತ್ ಮತ್ತು ಜಾರ್ಖಾಂಡ್ ನಿಂದ ೨೨೭ ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ಎರಡು ರೈಲು ನಗರಕ್ಕೆ ರಾತ್ರಿ ಮತ್ತು ಮುಂಜಾನೆ ನಗರಕ್ಕೆ ಆಗಮಿಸಿವೆ
ಜಾರ್ಖಾಂಡ್ ನ ಟಾಟಾನಗರದಿಂದ ೧೨೦ ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ನಿನ್ನೆ ರಾತ್ರಿ ೧ ಗಂಟೆಗೆ ಆಮ್ಲಜನಕ ಹೊತ್ತ ೨೬ನೇ ಎಕ್ಸ್ ಪ್ರೆಸ್ ನಗರಕ್ಕೆ ಆಗಮಿಸಿದೆ.
ಮತ್ತೊಂದು ಆಮ್ಲಜನಕ ಎಕ್ಸ್‌ಪ್ರೆಸ್ ರೈಲು ಗುಜರಾತ್‌ನ ಜಾಮ್ನ ಗರದಿಂದ ಬೆಂಗಳೂರಿಗೆ ೧೦೭ ಮೆ ಟನ್ ಆಕ್ಸಿಜನ್ ಹೊತ್ತು ಬೆಳಗಿನ ಜಾವ ೪.೫೫ಕ್ಕೆ ತಲುಪಿದೆ. ಜಾರ್ಖಂಡ್ ಒರಿಸ್ಸಾ ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಂದ ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ರಾಜ್ಯಕ್ಕೆ ಆಮ್ಲಜನಕ ಪೂರೈಕೆ ಆಗುತ್ತಿದೆ.
ನಗರಕ್ಕೆ ೨೬ನೇ ಆಮ್ಲಜನಕ ಹೊತ್ತ ರೈಲು ನಗರಕ್ಕೆ ಆಗಮಿಸಿರುವ ವಿಷಯವನ್ನು ನೈರುತ್ಯ ರೈಲ್ವೆವಿಭಾಗ ತನ್ನ ಟ್ವಿಟರ್ ನಲ್ಲಿ ತಿಳಿಸಿದೆ.
ರಾಜ್ಯಕ್ಕೆ ಇದುವರೆಗೆ ೨ ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಆಮ್ಲಜನಕವನ್ನು ವಿವಿಧ ರಾಜ್ಯಗಳಿಂದ ಪೂರೈಕೆ ಮಾಡಲಾಗಿದೆ..
ಕೊರೊನಾ ಸೋಂಕು ವಿರುದ್ಧ ರಾಜ್ಯ ಸರ್ಕಾರ ನಡೆಸಿರುವ ಹೋರಾಟದಲ್ಲಿ ಭಾರತೀಯ ರೈಲ್ವೆ ಇಲಾಖೆಯ ಕೈಜೋಡಿಸಿದ್ದು ರಾಜ್ಯಕ್ಕೆ ಇದುವರೆಗೂ ೨೭ ಆಮ್ಲಜನಕ ವಿಶೇಷ ರೈಲುಗಳು ಆಗಮಿಸಿವೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ