225 ಮೀಟರ್ ಆಳದ ಝಂಜ್ರಾ ಭೂತಳ ಗಣಿಯನ್ನು ವೀಕ್ಷಣೆ ಮಾಡಿದ ಸಚಿವ ಜೋಶಿ


ನವದೆಹಲಿ, ನ. 25: ಕೇಂದ್ರ ಸರಕಾರದ ಕೋಲ್ ಇಂಡಿಯಾ ಲಿಮಿಟೆಡ್‍ನ ಅಂಗ ಸಂಸ್ಥೆಯಾದ ಈಸ್ಟರ್ನ್ ಕೋಲ್‍ಫೀಲ್ಡ್ ಲಿಮಿಟೆಡ್‍ನ ಪಶ್ಚಿಮ ಬಂಗಾಳದ ಝಂಜ್ರಾ ಭೂತಳ (ಭೂಗತ) ಗಣಿಯನ್ನು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿಯವರು ಭೇಟಿ ಮಾಡಿದರು. ಈ ಗಣಿಯು ಭೂಮಿಯ ಮೇಲ್ಮೈನಿಂದ 225 ಮೀಟರ್ ಆಳವನ್ನು ಹೊಂದಿದ್ದು ವಾರ್ಷಿಕ 3.5 ಮಿಲಿಯನ್ ಟನ್ ಸಾಮರ್ಥ್ಯದಲ್ಲಿ ಭಾರತದ ಅತೀ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಯಾಂತ್ರೀಕೃತ ಭೂಗತ ಗಣಿಯಾಗಿದೆ.
ಇದೇ ಮೊದಲ ಬಾರಿಗೆ ನಾನು 225 ಮೀಟರ್ ಭೂಗತ ಗಣಿಯೊಳಗೆ ಪ್ರವೇಶಿಸಿ ಗಣಿಗಾರಿಕೆ ವೀಕ್ಷಿಸಿದ್ದು, ವೈಶಿಷ್ಟ್ಯ ಪೂರ್ಣ ಅನುಭವ ಎಂದು ಜೋಶಿಯವರು ಹೇಳಿ, ಇಂತಹ ವಿಷಮ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ ಗಣಿ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದರಲ್ಲದೆ ಈ ಎಲ್ಲ ಕಾರ್ಯಗಳಿಗೆ ಮಾರ್ಗದರ್ಶನ ಮಾಡುವ ಗಣಿ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದೂ ಹೇಳಿದರು.
ಸಚಿವ ಪ್ರಲ್ಹಾದ ಜೋಶಿಯವರು ಗಣಿ ಇಲಾಖೆ ಅಧಿಕಾರಿಗಳೊಂದಿಗೆ ರಕ್ಷಣಾ ಕವಚ ಧರಿಸಿ 225 ಮೀಟರ್ ಆಳದ ಭೂಗತ ಗಣಿ ವೀಕ್ಷಣೆ ಮಾಡಿದರು. ಇದೂವರೆಗೆ ಯಾವುದೇ ಗಣಿ ಸಚಿವರು ಇಂತಹ ಸಾಹಸಕ್ಕೆ ಒಡ್ಡಿಕೊಂಡಿರದ ಈ ಕಾರ್ಯ ಸಚಿವ ಜೋಶಿಯವರು ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಸಚಿವರ ಈ ಕಾರ್ಯವನ್ನು ಗಣಿ ಇಲಾಖೆ ಅಧಿಕಾರಿಗಳು ಕೊಂಡಾಡಿದ್ದಾರೆ.
ಈ ಸಮಯದಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಮಾತನಾಡಿ, ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚು ಮಾಡಲು, ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 2 ಮಿಲಿಯನ್ ಟನ್‍ಗಳಿಗಿಂತ ಹೆಚ್ಚು ಮಾಡಲು ಶ್ರಮವಹಿಸುವಂತೆ ಸೂಚಿಸಿದರು. ಈ ಸಮಯದಲ್ಲಿ ಎರಡು ಕಡಿಮೆ ಆಳದ ನಿರಂತರ ಗಣಿಗಾರಿಕೆಯನ್ನು ಪರಿಚಯಿಸಲಾಗುವುದು ಎಂದು ಜೋಶಿಯವರು ಹೇಳಿದರು. 5 ಮೆಟ್ರಿಕ್ ಟನ್ ಸಾಮರ್ಥ್ಯದ ಕಲ್ಲಿದ್ದಲು ಹೊರತೆಗೆಯುವಿಕೆಯನ್ನು ಹೆಚ್ಚಿಸಲು ರೈಲ್ವೆ ಕಾರಿಡಾರ್ ನಿರ್ಮಾಣ ಹಂತದಲ್ಲಿದೆ.
ಝಾಜ್ರಾ ಕಲ್ಲಿದ್ದಲು ಗಣಿಯು ಭೂಗತ ಗಣಿಯಾಗಿದ್ದು, ಕೋಲ್ ಇಂಡಿಯಾದ ಅಂಗಸಂಸ್ಥೆಯಾದ ಈಸ್ಟರ್ನ್ ಕೋಲ್‍ಫೀಲ್ಡ್ ಲಿಮಿಟೆಡ್‍ನಿಂದ ನಿರ್ವಹಿಸಲ್ಪಡುತ್ತದೆ, ಇದು ವಾರ್ಷಿಕ 3.5 ಮಿಲಿಯನ್ ಟನ್‍ಗಳನ್ನು ಉತ್ಪಾದಿಸುತ್ತದೆ, ಪಶ್ಚಿಮ ಬಂಗಾಳದ ಪಶ್ಚಿಮ ಬಂಗಾಳದ ರಾಣಿಗಂಜ್ ಕಲ್ಲಿದ್ದಲು ಕ್ಷೇತ್ರದಲ್ಲಿ, ಪಶ್ಚಿಮ ಬಂಗಾಳದಲ್ಲಿದೆ.
2015-16 ರಂತೆ, ನಿರಂತರ ಗಣಿಗಾರಿಕಾ ಸಮೂಹ ಉತ್ಪಾದನಾ ತಂತ್ರಜ್ಞಾನದ ನಿಯೋಜನೆಯೊಂದಿಗೆ ಝಂಜ್ರಾ ಗಣಿಗಳಲ್ಲಿ ಪರಿಚಯಿಸಲಾಗಿದೆ. ಲಾಂಗ್‍ವಾಲ್ ಗಣಿಗಾರಿಕೆಯನ್ನು ಸಹ ಪರಿಚಯಿಸಲಾಗಿದೆ. ಮ್ಯಾನ್ ರೈಡಿಂಗ್ ಸಿಸ್ಟಮ್ ಮತ್ತು ಫ್ರೀ ಸ್ಟೀರ್ಡ್ ವೆಹಿಕಲ್ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.