22 ವಲಸೆ ಜಾನುವಾರು ಸಾವು


ಸಂಜೆವಾಣಿ ವಾರ್ತೆ
ಕುರುಗೋಡು:ಏ.07: ಪಟ್ಟಣ ಸಮೀಪದ ಯರಿಂಗಳಿಗಿ ಗ್ರಾಮದ ಸಾರ್ವಜನಿಕರ ಜಮೀನಿನಲ್ಲಿ ಜೋಳದ ಬೆಳೆಯ ಚಿಗುರು ಸೇವಿಸಿ 22 ವಲಸೆ ಜಾನುಗಾರುಗಳು ಮೃತಪಟ್ಟಿರುವ ಘಟನೆ ಜರುಗಿದೆ.
ಗಂಗಾವತಿ ತಾಲೂಕು ಹಣವಾಳ ಗ್ರಾಮದ ಯಾದವ ಹನುಮಂತಪ್ಪ ಇವರ 13 ಹಸು, ಕೊಪ್ಪಳ ತಾಲ್ಲೂಕಿನ ಕೊಕನಪಳ್ಳಿ ಗ್ರಾಮದ ಸಣ್ಣೆಪ್ಪ ಅವರಿಗೆ ಸೇರಿದ 5 ಹಸು ಮತ್ತು ಕೊಪ್ಪಳ ತಾಲ್ಲೂಕಿನ ವೆಂಕಟಗಿರಿ ಗ್ರಾಮದ ಕರಿಯಪ್ಪ ಅವರಿಗೆ ಸೇರಿದ 4 ಹಸು ಈ ವರಿಗೆ ಸೇರಿ ಒಟ್ಟು 22 ಮೃತಪಟ್ಟ ಹಸುಗಳು.
ತಹಶೀಲ್ದಾರ್ ಗುರುರಾಜ್ ಎಂ.ಚಲವಾದಿ, ಪಶುವೈದ್ಯ ಡಾ.ಬಸವರಾಜ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಗೌಡ, ಗ್ರಾಮಲೆಕ್ಕಾಧಿಕಾರಿ ನಾಗರಾಜ ಘಟನಾಸ್ಥಳಕ್ಕೆ ಭೇಡಿನೀಡಿ ಪರಿಶೀಲಿಸಿದರು.