22 ರಂದು ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬ

ಹುಬ್ಬಳ್ಳಿ ನ 20 : ದೀಪಾವಳಿ ಹಬ್ಬದ ಅಂಗವಾಗಿ ಹುಬ್ಬಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಹುಬ್ಬಳ್ಳಿ ಆಕಾಶಬುಟ್ಟಿ ಹಬ್ಬವನ್ನು ದಿ. 22 ರವಿವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ರಾಜು ಜರತಾರಘರ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 11 ಗಂಟೆಗೆ ಕಮರಿಪೇಟೆಯ ಶ್ರೀ ಕಮರೆಮ್ಮ ಹಾಲ್‍ನಲ್ಲಿ 8 ರಿಂದ 12 ಹಾಗೂ 12 ರಿಂದ 16 ವಯಸ್ಸಿನ ಚಿಕ್ಕಮಕ್ಕಳಿಗಾಗಿ ಆಕಾಶಬುಟ್ಟಿ ತಯಾರಿಸುವ ಸ್ಪರ್ಧೆ ಹಾಗೂ ಪ್ರದರ್ಶನ ಜರುಗಲಿದೆ. ಮಧ್ಯಾಹ್ನ 2 ಗಂಟೆಗೆ ಮಹಿಳೆಯರಿಗಾಗಿ ತಮ್ಮ ತಮ್ಮ ಮನೆಯ ಅಂಗಳದಲ್ಲಿ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಈ ರಂಗೋಲಿ ಸ್ಪರ್ಧೆಗಳು ಆಯಾ ಓಣಿಗಳಲ್ಲಿ ಜರುಗಲಿವೆ.
ಸಂಜೆ 6 ಗಂಟೆಗೆ ಕಮರಿಪೇಟೆಯ ಜೈ ಭಾರತ ಸರ್ಕಲ್‍ನಲ್ಲಿ ಆಕಾಶ ಬುಟ್ಟಿ ಹಬ್ಬ ಅತಿಥಿಗಳಿಂದ ಉದ್ಘಾಟನೆ. ನಂತರ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ನಗದು ಬಹುಮಾನ ವಿತರಣೆ ಜರುಗಲಿದೆ ಎಂದರು.
ಈ ಕಾರ್ಯಕ್ರಮಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎಸ್.ಕೆ ಬ್ಯಾಂಕಿನ ಚೇರ್ಮನ್‍ರಾದ ವಿಠ್ಠಲ ಲದವಾ, ಪ್ರಭು ನವಲಗುಂದಮಠ, ಚಂದ್ರಶೇಖರ ಗೋಕಾಕ, ಡಿ.ಕೆ.ಚವ್ಹಾಣ, ಸಂತೋಷ ಚವ್ಹಾಣ, ದೀಪಕ ಜಿತೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.