22 ರಂದು ಲಕ್ಷ ರಾಮಮಂತ್ರ ಜಪ

ಕಲಬುರಗಿ,ಜ.19: ಅಯೋಧ್ಯೆಯಲ್ಲಿ ಇದೇ 22 ರಂದು ಶ್ರೀರಾಮಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಕಲಬುರಗಿ ಜಯತೀರ್ಥ ನಗರದ ಲಕ್ಷ್ಮೀನಾರಾಯಣ ಮಂದಿರದಲ್ಲಿ ಹಂಸ ನಾಮಕ ಮತ್ತು ಲಕ್ಷ್ಮೀನಾರಾಯಣ ಪಾರಾಯಣ ಸಂಘದಿಂದ ಲಕ್ಷ ಶ್ರೀರಾಮ ನಾಮಜಪ, ವಿಷ್ಣು ಸಹಸ್ರ ನಾಮ, ಸುಂದರ ಕಾಂಡ ಪಾರಾಯಣ, ಸಂಜೆ ಪಂಡಿತ ಸೌರಭ ಆಚಾರ್ಯ ಅಷ್ಟಗಿ ಅವರಿಂದ ಭಗವದ್ಗೀತೆಯ ಪ್ರವಚನ, ಮಹಿಳಾ ಭಜನಾ ಮಂಡಳಿಯಿಂದ ಭಜನೆ, ರಾಮನಾಮ ಜಪ,ದೀಪೋತ್ಸವ ನಡೆಯುತ್ತಲಿದೆ ಎಂದು ರವಿ ಲಾತೂರಕರ ತಿಳಿಸಿದ್ದಾರೆ.ಕಾರ್ಯಕ್ರಮ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಡಾ. ಕೃಷ್ಣ ಕಾಕಲವಾರ, ರವಿ ಲಾತೂರಕರ,ಜಗನ್ನಾಥ್ ಸಗರ್ ,ನರಸಿಂಗರಾವ, ಲಕ್ಷ್ಮಣ್ ರಾವ ದೇಶಪಾಂಡೆ,ಸುರೇಶ್ ಕುಲಕರ್ಣಿ, ಅನಿಲ್ ಕುಲಕರ್ಣಿ,ಪ್ರವೀಣ್ ಓಂಕಾರ, ಅಪ್ಪಾರಾವ ಟಕ್ಕಳಕಿ,ರಾಮಾಚಾರ್ಯ ನಗನೂರ, ಸುರೇಖಾ ಮುಜುಂದಾರ, ಜ್ಯೋತಿ ರವಿ ಲಾತೂರಕರ ಉಪಸ್ಥಿತರಿದ್ದರು.