22 ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾನೂನು ನೆರವು ಶಿಬಿರ ಯೋಯೋಜನೆ

ಜಗಳೂರು.ನ.೨; ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಮುಂದಿನ 14 ದಿನಗಳ ಕಾಲ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಕಾನೂನು ಅರಿವು ನೆರವು  ಶಿಬಿರವನ್ನು ಆಯೋಜಿಸಲಾಗಿದ್ದು, ಗ್ರಾಮೀಣ ಪ್ರದೇಶದ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿವಿಲ್ ಮತ್ತು ಜೆ ಎಂಎಫ್ ಸಿ ನ್ಯಾಯಾಧೀಶ ಮಹಮ್ಮದ್ ಯೂನಸ್ ಅಥಣಿ ಸಲಹೆ ನೀಡಿದರು.ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರ ವಕೀಲರ ಸಂಘದದಲ್ಲಿ ಆಯೋಜಿಸಲಾಗಿದ್ದ 14 ದಿನಗಳ ಕಾನೂನು ನೆರವು  ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಹಳ್ಳಿಹಳ್ಳಿಗೆ ತೆರಳಿ ಕಾನೂನುಗಳ ಬಗ್ಗೆ ಅರಿವು ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡವರು ಮತ್ತು  ಮಹಿಳೆಯರಿಗೆ  ಈ ಕಾರ್ಯಕ್ರಮದ ಅತ್ಯಂತ ಸಹಕಾರಿಯಾಗಲಿದೆ. ಕಾನೂನಿನ ಅರಿವು ಇದ್ದಲ್ಲಿ ಸರ್ಕಾರದ ಪ್ರತಿಯೊಂದು ಸೌಲಭ್ಯವನ್ನು ಪಡೆಯಲು ನೆರವಾಗಲಿದೆ ಎಂದು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಇ. ಓಂಕಾರೇಶ್ವರ , ಉತ್ತಮ ಸಮಾಜ ನಿರ್ಮಾಣ ಮಾಡುವ ದಿಸೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆಶಯದಂತೆ ಸಮಾಜದ ಎಲ್ಲಾ ವರ್ಗದ ಜನರಿಗೆ ಕಾನೂನು ಅರಿವು ಮೂಡಿಸುವ ಹಾಗೂ ದುರ್ನಬಲರು ಮತ್ತು ಬಡವರಿಗೆ  ಉಚಿತ ಕಾನೂನು ನೆರವು ನೀಡುವ ಮಹತ್ವದ ಕಾರ್ಯಕ್ರಮ ಇದಾಗಿದೆ. ನವೆಂಬರ್ 13ರವರೆಗೆ ತಾಲ್ಲೂಕಿನ ಹಳ್ಳಿಗಳ ಜನರ ಮನೆ ಬಾಗಿಲಿಗೆ  ತೆರಳಿ ಕಾನೂನಿನ ತಿಳಿವಳಿಕೆ ನೀಡಲಾಗುತ್ತದೆ ಎಂದರು.ವಕೀಲರಾದ ಬಿ.ಶರಣಪ್ಪ, ಟಿ. ಬಸವರಾಜ್ , ಭೂಪತಿ , ಹನುಮಂತಪ್ಪ ಇದ್ದರು.

Attachments area