22 ಕೋಟಿ ವೆಚ್ಚದ ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ಶಂಕುಸ್ಥಾಪನೆ.

ಜಗಳೂರು.ಮಾ.೨೨: ಸಂಸದ ಜಿ.ಎಂ ಸಿದ್ದೇಶ್ವರ್ ಮತ್ತು ಶಾಸಕ ಎಸ್. ವಿ ರಾಮಚಂದ್ರ ಅವರ ನೇತೃತ್ವದಲ್ಲಿ ತಾಲೂಕಿನ ಕಾಮಗೇತನಹಳ್ಳಿ ದೊಣ್ಣೆ ಹಳ್ಳಿ ಹೊಸಹಟ್ಟಿ ಗ್ರಾಮದ ಬಳಿ 22 ಕೋಟಿ ವೆಚ್ಚದ ಅಂಬೇಡ್ಕರ್ ವಸತಿ ಶಾಲೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಯಿತು.ಸಂಸದ ಜಿಎಂ ಸಿದ್ದೇಶ್ವರ್ ಮಾತನಾಡಿ,ಜಗಳೂರು ತಾಲೂಕು ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿಯಲ್ಲಿದೆ.ಬಡ ಕುಟುಂಬದ ಮಕ್ಕಳಿಗೆ ವಸತಿ ಶಾಲೆಗಳು ವರದಾನವಾಗಲಿವೆ.ಶೀಘ್ರದಲ್ಲಿ  ಕೇಂದ್ರ ಸರ್ಕಾರದ ಏಕಲವ್ಯ ವಸತಿ ಶಾಲೆ 50 ಕೋಟಿ ವೆಚ್ಚದಲ್ಲಿ ಶೀಘ್ರ ಮಂಜೂರಾತಿ ಸಿಗಲಿದೆ.57 ಕೆರೆ ನೀರು ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗಳಿಂದ ತಾಲೂಕಿನಲ್ಲಿ ನೀರು ಹರಿದು ಬರಲಿದ್ದು  ಜಗಳೂರು ಸಮೃದ್ದಿ ನಾಡಾಗಲಿದೆ ಎಂದರು.ಶಾಸಕ ಎಸ್ ವಿ ರಾಮಚಂದ್ರ ಮಾತನಾಡಿ,ತಾಲೂಕಿನಲ್ಲಿ ಎರಡು ವಸತಿ ಶಾಲೆಗಳ ಭಾಗ್ಯ ಒಲಿದು ಬಂದಿರುವುದು ನಮ್ಮ ಮಕ್ಕಳ ಭವಿಷ್ಯಕ್ಕೆ ದಾರಿಯಾಗಲಿದ್ದು ಶಾಲಾ ಕಟ್ಟಡ ಹಾಗೂ  ಶೈಕ್ಷಣಿಕ ಪ್ರಗತಿಯಲ್ಲಿ ರಾಜಕೀಯ ಬೇಡ,. ಕಟ್ಟಡ ಕಾಮಗಾರಿ ಹಾಗೂ ಗುಣಮಟ್ಟದಲ್ಲಿ  ಪೂರ್ಣಗೊಳ್ಳಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್ , ಜಿ.ಪಂ  ಉಪಾಧ್ಯಕ್ಷೆ  ಸಾಕಮ್ಮ,ಸದಸ್ಯ ಎಸ್.ಕೆ.ಮಂಜುನಾಥ್,ತಾ.ಪಂ ಸದಸ್ಯ ವಕೀಲ ಬಸವರಾಜ್ ,ಮುಖಂಡರಾದ ಪಾತಲಿಂಗಪ್ಪ,ಮರೇನಹಳ್ಳಿ ನಾಗರಾಜ್ , ಗ್ರಾ‌ಪಂ ಗುರುಮೂರ್ತಿ,ತಿಪ್ಪೇಸ್ವಾಮಿ,ನರಸಿಂಹಮೂರ್ತಿ,ಕುಮಾರ್,ಸಿದ್ದಲಿಂಗಪ್ಪ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ
ಎಪಿಎಂಸಿ ಸದಸ್ಯ ಜಯ್ಯಣ್ಣ,ಮಾಜಿ ಜಿ.ಪಂ ಸದಸ್ಯ ನಾಗರಾಜ್, ಪ್ರಾಂಶುಪಾಲ ನಾಗರಾಜ್ ,ಸಂತೋಷ್,ಸೇರಿದಂತೆ ಭಾಗವಹಿಸಿದ್ದರು.