22ರಂದು ಬಿಜೆಪಿ ಮಹಾಸಂಕಲ್ಪ ಅಭಿಯಾನ: ಮಂಠಾಳಕರ್

ಬೀದರ್:ಜೂ.19: ಈ ತಿಂಗಳ 22 ರಂದು ನಗರದ ಪ್ರತಾಪ್ ನಗರ ಬಡಾವಣೆಯಲ್ಲಿರುವ ಬೆಲ್ದಾಳೆ ಫಂಕ್ಷನ್ ಹಾಲ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಮಹಾ ಸಂಕಲ್ಪ ಅಭಿಯಾನ ಸಭೆ ಜರುಗಲಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಶಿವಾನಂದ್ ಮಂಠಾಳಕರ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ಮಹಾಸಂಕಲ್ಪ ಸಭೆಯಲ್ಲಿ ಸುಮಾರು ಮೂರರಿಂದ ಮೂರುವರೆ ಸಾವಿರ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಆತ್ಮಾವಲೋಕನ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಅಭಿಪ್ರಾಯ ಸಂಗ್ರಹಣ ಕಾರ್ಯಕ್ರಮ ಈ ಸಂದರ್ಭದಲ್ಲಿ ಜರುಗಲಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಪ್ರಚಾರ ಪಡಿಸುವ ಕಾರ್ಯಕ್ರಮ ಇದರ ಉದ್ದೇಶ ಹೊಂದಿದೆ ಎಂದು ಮಂಠಾಳಕರ್ ತಿಳಿಸಿದರು.

ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಕುಮಾರ್ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾಜಿ ಬೂಡಾ ಅಧ್ಯಕ್ಷ ಬಾಬು ವಾಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ್ ನಾಗಮೂರ್ತಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಅರಹಂತ ಸಾವಳೆ, ಕಚೇರಿ ಕಾರ್ಯದರ್ಶಿ ರಾಜಕುಮಾರ ಪಾಟೀಲ ನೇಮಕಾಬಾದ್, ಮಾಧ್ಯಮ ಸಂಚಾಲಕ ಶ್ರೀನಿವಾಸ ಚೌಧರಿ ಸೇರಿದಂತೆ ಅನೇಕತಿದ್ದರು.

ಕೇಂದ್ರದ ಮೇಲೆ ಗೂಬೆ ಕೂರಿಸುವುದು ಬಿಟ್ಟು ಮಾತು ಕೊಟ್ಟಂತೆ ಐದು ಗ್ಯಾರಂಟಿಗಳು ಪೂರೈಸಿ ಭಗವಂತ ಖೂಬಾ
ಬೀದರ್: ಬಡ ಜನರು ಕಾಂಗ್ರೆಸ್ ಸರ್ಕಾರದ ಸುಳ್ಳು ಭರವಸೆಗಳಿಗೆ ಮಾರುಹೋಗಿ, ಇವರ ಪೆÇಳ್ಳು ಗ್ಯಾರಂಟಿಗಳಿಗೆ ಮೋಸ ಹೋಗಿ ಮತ ಚಲಾಯಿಸಿ ಸರ್ಕಾರ ಬರಲು ಕಾರಣವಾಗಿದೆ. ಜನರಿಗೆ ಕೊಟ್ಟ ಆಶ್ವಾಸನೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ರೀತಿಯಲ್ಲಿ ಪೂರೈಸಬೇಕೆಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ತಿಳಿಸಿದರು
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಖೂಬಾ ಅವರು, ರಾಹುಲ ಗಾಂಧಿಯವರ ಮಾತಿಗೆ ಮಣೆ ಹಾಕಿ ಸಿದ್ದರಾಮಯ್ಯನವರು ಈಗ ಜನರಿಗೆ ಕೊಡಬೇಕಾಗಿದ 10 ಕೆ.ಜಿ ಅಕ್ಕಿಯನ್ನು ಸಮರ್ಪಕ ರೀತಿಯಲ್ಲಿ ಕೊಡಲು ಸಾಧ್ಯವಾಗದೆ ಕೇಂದ್ರ ಸರಕಾರ ನಮಗೆ ಅಕ್ಕಿ ಕೊಡಲು ಮೋಸ ಮಾಡಿದೆ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.
2013ನೇ ಇಸವಿಯಲ್ಲಿ ನಿಮ್ಮ ಸರ್ಕಾರವಿದ್ದಾಗ ಕೇಂದ್ರದಲ್ಲಿ ನಿಮ್ಮದೇ ಮನಮೋಹನ ಸಿಂಗ್ ಸರ್ಕಾರ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ನಿಮಗೆ ಅಕ್ಕಿ ಕೊಡಲು ನಿರಾಕರಿಸಿದಾಗ ನೀವು ಅವರ ಮೇಲೆ ಗೂಬೆ ಏಕೆ ಕೂರಿಸಲಿಲ್ಲ ಎಂದು ಪ್ರಶ್ನೆ ಮಾಡಿದ ಖೂಬಾ ಅವರು, ‘ಕುಣಿಯಲಿಕ್ಕೆ ಕುಣಿಯಲಿಕ್ಕೆ ಬಾರದೆ ಹೋದರೆ ಈ ಪ್ರಾಂಗಣವೇ ಡೋಂಕು’ ಎನ್ನುವಂತೆ ನಿಮಗೆ ಈಗ ಸಮರ್ಪಕ ರೀತಿಯಲ್ಲಿ ಜನರ ಆಶೋತ್ತರಗಳು ಈಡೇರಿಸದೆ ಸಾಧ್ಯವಾಗದಿದ್ದಾಗ ನಮ್ಮ ಮೇಲೆ ಆರೋಪ ಹೋರಿಸುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಖೂಬಾ ಲೆವಡಿ ಮಾಡಿದರು.
ರಾಜಕೀಯ ತುಷ್ಟೀಕರಣ ಮಾಡುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ಹಿಂಪಡೆದಿರುವುದು ಸರ್ಕಾರದ ದುರಹಂಕಾರಕ್ಕೆ ನೈಜ ಸಾಕ್ಷಿ ಎಂಬಂತಾಗಿದೆ. ಅಭಿವೃದ್ಧಿ ಮಾಡುವುದು ಬಿಟ್ಟು ರಾಜಕೀಯ ಮಾಡುವುದನ್ನು ಮುಂದುವರೆಸಿರುವ ಈ ಸರ್ಕಾರಕ್ಕೆ ಕೆಲವೇ ದಿನಗಳಲ್ಲಿ ಒಳ್ಳೆ ಪಾಠವಾಗಲಿದೆ. ಈ ವರ್ಷದ ಪಠ್ಯದಲ್ಲಿನ ಸಾವರ್ಕರಂತಹ ಅನೇಕ ಮಹಾನ್ ಭಕ್ತರ ಚರಿತ್ರೆಗಳನ್ನ ತೆಗೆದು ಹಾಕಿರುವುದು ದ್ವೇಷ ರಾಜಕೀಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಖೂಬಾ ಇದೆ ವೇಳೆ ಗಂಭೀರ ಆರೋಪ ಮಾಡಿದರು.