22ನೇ ಕರ್ನಾಟಕ ರಾಜ್ಯ ವುಶು ಕ್ರೀಡಾಕೂಟ

ಬೀದರ್: ಡಿ.28:ಕರ್ನಾಟಕ ವುಶು ಸಂಸ್ಥೆಯ ನೆರವಿನೊಂದಿಗೆ 22ನೇ ಕರ್ನಾಟಕ ರಾಜ್ಯ ವುಶು ಕ್ರೀಡಾಕೂಟ (ಸಬ್ ಜೂನಿಯರ, ಜೂನಿಯರ್ ಹಾಗೂ ಸಿನಿಯರ್)ನ್ನು ಇಂದಿನಿಂದ ಡಿಸೆಂಬರ್ 30ರ ವರೆಗೆ ನಗರದ ನೆಹರು ವಳಾಂಗಣ ಕ್ರೀಡಾಂಗಣ ಬೀದರನಲ್ಲಿ ಆಯೋಜಿಸಿದ್ದೆವೆ ಎಂದು ವುಶು ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಅಶೋಕ ಮುಕಾಶಿ ಹೇಳಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿ ಉದ್ದೆಸಿಸಿ ಮಾತನಾಡಿದ ಅವರು, ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂದಾಜು 700 ಕ್ರೀಡಾಪಟುಗಳು, ತರಬೇತಿದಾರರು ಹಾಗೂ ನಿರ್ಣಾಯಕರು ಹಾಗೂ ಪಾಲಕರು ಪೆÇೀಷಕರು ಭಾಗವಹಿಸಲಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಉಟ, ನೀರು ಹಾಗೂ ವಸತಿಯ ವ್ಯವಸ್ಥೆಯನ್ನು ಬೀದರ ಜಿಲ್ಲಾ ವುಶು ಸಂಸ್ಥೆಯು ಮಾಡಿರುತ್ತಾರೆ. ಬಾಲಕೀಯರಿಗೆ ಸೂರಕ್ಷಿತವಾದ ಪ್ರತ್ಯಕ ವಸತಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಉತ್ತಮ ಗುಣಮಟ್ಟದ ಪ್ರಶಸ್ತಿ ಪದಕ ಹಾಗೂ ಪ್ರಮಾಣ ಪತ್ರವನ್ನು ನೀಡಿದ ಗೌರವಿಸಲಾಗುವುದು ಹಾಗೂ ಹೆಚ್ಚಿನ ಪದಕಗಳನ್ನು ಪಡೆದ ಜಿಲ್ಲಾ ತಂಡಗಳಿಗೆ ಚಾಂಪಿಯನ್ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು ಎಂದರು.
ಈ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳನ್ನು ಮುಂಬರುವ ರಾಷ್ಟ್ರೀಯ ಸಬ್ ಜೂನಿಯರ್, ಜೂನಿಯರ್ ಹಾಗೂ ಸಿನಿಯರ್ ಕ್ರೀಡಾಕೂಟದಲ್ಲಿ ಭಾಗಿಯಾಗಲು ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಗುವುದು ಎಂದವರು ಹೇಳಿದರು.
1989ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಇಂದು ಜಗತ್ತಿನ 145 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಭಾರತದ ಮೂಲ ಸಂಸ್ಥೆಯಾಗಿದ್ದು, ವಿದೇಶಿಗರು ನಮ್ಮ ಈ ಕ್ರೀಡೆಯನ್ನು ಅನುಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಇದೆ ಮೊದಲನೆ ಸಲ ಬೀದರನಲ್ಲಿ ಆಯೋಜನೆ ಯಾಗುತ್ತಿರುವ ಈ ಒಲಂಪಿಕ ಕ್ರೀಡಾಕೂಟದಲ್ಲಿ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮುಕಾಶಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಖಜಾಂಚಿ ಸಂಗಮೇಶ ಲಾಯತಗುಂಡಿ, ಜಿಲ್ಲಾ ಕಾರ್ಯದರ್ಶಿ ಸುವಿತ ಮೋರೆ, ಜಿಲ್ಲಾ ಉಪಾಧ್ಯಕ್ಷ ಸುರ್ಯಕಾಂತ ಮೋರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.