ರಾಯಚೂರು.ಮೇ.೪-ಮಹಾಮಾರಿಯಾಗಿ ತಾಂಡವ ಮಾಡುತ್ತಿರುವುದ ಕೊರೊನಾ ಸಂಕಷ್ಟಕ್ಕೆ ಸಿಕ್ಕಿ ಪರದಾಡುವ ಜನರ ನೆರವಿಗೆ ಎನ್.ಎಸ್ ಬೋಸರಾಜು ಫೌಡೇಷನ್ ನೆರವಿಗೆ ದಾವಿಸಿ ಮಾನವೀಯತೆ ಮರೆದಿದೆ.
ಪ್ರವಾಹದಲ್ಲಿ ಕೊಚ್ಚಿ ಹೋಗುವವರಿಗೆ ಹುಲ್ಲು ಕಡ್ಡಿಯೂ ಆಸರೆ ಎನ್ನುವಂತೆ ಕೊರೊನಾ ಮಾಹಾಮಾರಿಗೆ ತುತ್ತಾಗಿ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಸಾಗಿಸಲು ಪರದಾಡುವವ ಪಾಲಿಗೆ ಅಂಬುಲೆನ್ಸ್ ಉಚಿತ ಸೇವೆಯ ಮೂಲಕ ಜನರ ನೆರವಿದೆ ಕೈ ಚಾಚಿದ್ದಾರೆ. ಜಂಬೋ ಆಕ್ಸಿಜನ್ ವ್ಯವಸ್ಥೆಯೊಂದಿಗೆ ಎಲ್ಲ ವ್ಯದ್ಯಕೀಯ ಸೌಲತ್ತುಗಳುಳ್ಳ ಅಂಬ್ಯುಲೆನ್ಸ್ ಉಚಿತ ಸೇವೆಗೆ ನೀಡಲಾಗಿದೆ. ಖಾಸಗಿ ಸಂಸ್ಥೆಯೊಂದು ಕೊರೊನಾ ಸೋಂಕಿತರ ಚಿಕಿತ್ಸೆ ಮುಂದಾಗುವ ಮೂಲಕ ಮಾದರಿಯಾಗಿದೆ.
ಇಂದು ನಗರದ ನಗರಸಭೆ ಹತ್ತಿರ ಎನ್.ಎಸ್. ಬೋಸರಾಜ ಪೌಂಡೇಶನ್ ವತಿಯಿಂದ ಕೊರೊನ ರೋಗಿಗಳಿಗೆ ಉಚಿತ ಆಂಬ್ಯುಲೆನ್ಸ್ ಹಾಗೂ ಸ್ಯಾನಿಟೈಸರ್ ಟ್ಯಾಂಕ್ ಸಾರ್ವಜನಿಕರ ಉಪಯೋಗಕ್ಕೆ ಆರ್ಪಿಸಲಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಹಾಗೂ ಮಾಜಿ ಸಂಸದರಾದಬಿ.ವಿ.ನಾಯಕ ಕೊರೊನ ಎರಡನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿದ್ದು ಕೊರೊನ ರೋಗಿಗಳನ್ನು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ವೆಂಟಿಲೇಟಾರ್ ಜೊತೆಗೆ ಐಸಿಯು ಅಂಬುಲೆನ್ಸ್ ನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅವರು ಹೇಳಿದರು.
ಮಾತನಾಡಿದ ಅವರು ಕಳೆದ ವರ್ಷ ಕೊರೊನ ಸಂದರ್ಭದಲ್ಲಿ ಗ್ರಾಮೀಣ ಮತ್ತು ನಗರದ ಪ್ರದೇಶದಲ್ಲಿ ಎನ್.ಎಸ್. ಬೋಸರಾಜು ಪೌಂಡೇಶನ್ ವತಿಯಿಂದ ಬಡವರಿಗೆ ಹಾಗೂ ಮನೆ ಮನೆಗೆ ಆಹಾರ ಕಿಟ್ ವಿತರಣೆ ಮಾಡಲಾಗಿತ್ತು.ಕೊರೊನ ಎರಡನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ,ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ, ನಗರ ಸಭೆ ಕಡಿಮೆ ಸಿಬ್ಬಂದಿಯಲ್ಲಿ ಸಾಕಷ್ಟು ಶ್ರಮ ಪಟ್ಟರು ನೀಕ್ಷಿತ ಮಟ್ಟದಲ್ಲಿ ಆರೋಗ್ಯ ಸೇವೆ ದೊರೆಯುತ್ತಿಲ್ಲ, ಇದಕ್ಕೆ ರಾಜ್ಯ ಸರ್ಕಾರದ ಉದಾಸಿನವೇ ಕಾರಣವಾಗಿದೆ.
ಅದರಿಂದ ನಾವು ಎನ್.ಎಸ್. ಬೋಸರಾಜ ಪೌಂಡೇಶನ್ ವತಿಯಿಂದ ಸಮಾಜ ಸೇವೆ ಮಾಡುವ ಕೆಲಸ ಮಾಡಿದ್ದೇವೆ ಅದರಿಂದ ಕೊರೊನ ರೋಗಿಗಳನ್ನು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ವೆಂಟಿಲೇಟಾರ್ ಜೊತೆಗೆ ಐಸಿಯು ವೀಲ ಅಂಬುಲೆನ್ಸ್ ನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಇದು ದಿನದ ೨೪ ಘಂಟೆಯಲ್ಲಿಯೂ ಲಭ್ಯವಿದೆ ಎಂದು ಹೇಳಿದರು.
ನಂತರ ಕಾಂಗ್ರೆಸ್ ರಾಜ್ಯ ಯುವ ಮುಖಂಡ ರವಿ ಬೋಸರಾಜು ಅವರು ಮಾತನಾಡುತ್ತ ದೇಶ ಮತ್ತು ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಸೋಂಕು ವೇಗವಾಗಿ ಹರಡುತ್ತಿದೆ ಸರ್ಕಾರದಿಂದ ಕೊರೊನ ರೋಗಿ ಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತಿಲ್ಲ,ನಿನ್ನೆ ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ೨೪ ಕೊರೊನ ರೋಗಿಗಳು ಆಮ್ಲಜನಕ ಇಲ್ಲದೆ ಮರಣ ಹೊಂದಿದ್ದಾರೆ ಅದರಿಂದ ಸ್ವಯಂ ಸೇವಾ ಸಂಘ ಸಂಸ್ಥೆಗಳು,ಅದೇ ರೀತಿ ನಮ್ಮ ಎನ್.ಎಸ್.ಬೋಸರಾಜು ಪೌಂಡೇಶನ್ ವತಿಯಿಂದ ಆಂಬ್ಯುಲೆನ್ಸ್ ಮತ್ತು ಸ್ಯಾನಿಟೈಸರ್ ಟ್ಯಾಂಕ್ ಸಾರ್ವಜನಿಕರಿಗೆ ಕೊರೊನ ರೋಗಿಗಳಿಗೆ ಉಪಯೋಗ ಆಗಲು ಮಾಡಲಾಗಿದೆ ಅದೇ ರೀತಿ ನವೋದಯ ಆಸ್ಪತ್ರೆಯ ಅಧ್ಯಕ್ಷರಾದ ಎಸ್.ಆರ್.ರೆಡ್ಡಿ ಅವರ ಹತ್ತಿರ ಮಾತನಾಡಲಾಗಿದ್ದು ೨೦೦ರಿಂದ ೪೦೦ ಬೆಡ್ ಗಳ ಸೌಲತ್ತುಗಳನ್ನು ನೀಡಿದ್ದಾರೆ ಹಾಗೂ ರೆಮಿಡಿಸಿಎಲ್ ಔಷಧಿಯು ಜಿಲ್ಲೆಯಲ್ಲಿ ಅಭಾವವಿದೆ ಅದರಿಂದ ಅದನ್ನು ಪೂರೈಸಲು ಮುಂದಾಗುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಶಾಂತಪ್ಪ,ಜಯಣ್ಣ, ಜಿ.ಶಿವಮೂರ್ತಿ, ಅಸ್ಲಾಂ ಪಾಷಾ,ಸಾಜೀಜ್ ಸಮೀರ್, ರಫೀಕ್ ಮೌಲಾನ್, ತಿಮ್ಮರೆಡ್ಡಿ, ಅರುಣ್ ದೊತರಬಂಡಿ,,ಗೋವಿಂದ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.